ಸಂವಿಧಾನಬದ್ಧವಾಗಿ ದೇಶ ನಡೆಯಬೇಕು: ಟಿ.ಬಿ.ಶೆಟ್ಟಿ
ಕುಂದಾಪುರ : ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮಾಡಿ ರಚಿಸಿದ ಸಂವಿಧಾನದಲ್ಲಿರುವ ಸಾವಿರಾರು ಕಾನೂನುಗಳ ಪ್ರಕಾರ ದೇಶವು ನಡೆಯಬೇಕು. ಆ ಉದ್ದೇಶದಿಂದ ನಾವೆಲ್ಲ ಕಾನೂನಿಗೆ ಅತ್ಯಂತ ಹೆಚ್ಚು ಮಹತ್ವ ನೀಡ ಬೇಕು. ಸರಕಾರ, ಅಧಿಕಾರಿಗಳು ಮಾತ್ರವಲ್ಲದೆ ಪ್ರತಿಯೊಬ್ಬರು ಕಾನೂನನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ನ್ಯಾಯವಾದಿ ಟಿ.ಬಿ. ಶೆಟ್ಟಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಮಿತಿ ವತಿಯಿಂದ ಕುಂದಾಪುರ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಲಾದ ಸಂವಿಧಾನ ಶಿಲ್ಪಿಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾನಿರ್ವಾಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ದೇಶದ ರಾಜಕಾರಣಿಗಳು ಸಂವಿಧಾನವನ್ನು ಸರಿಯಾಗಿ ಪಾಲಿಸಿದರೆ ಮಾತ್ರ ಅದಕ್ಕೆ ಹೆಚ್ಚು ಮಹತ್ವ ಬರುತ್ತದೆ. ಇಲ್ಲದಿದ್ದರೆ ಆಚರಣೆಯೇ ಇಲ್ಲದ ಪುಸ್ತಕವಾಗಿ ಉಳಿಯುತ್ತದೆ. ಸಂವಿಧಾನ ರಚನೆ ಸಮಿತಿಯ ದೊಡ್ಡ ದೊಡ್ಡ ಮೇಧಾವಿಗಳ ತಂಡದ ನೇತೃತ್ವ ವಹಿಸಿ ಹೀಗೆಯೇ ಆಗಬೇಕೆಂದು ದೇಶಕ್ಕೊಂದು ಭದ್ರ ಬುನಾದಿಯ ಸಂವಿಧಾನ ಕೊಟ್ಟವರು ಅಂಬೇಡ್ಕರ್ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಮಹಿಳಾ ಘಟಕ ಸಂಚಾಲಕಿ ಗೀತಾ ಸುರೇಶ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ್ ಬಾರ್ಕೂರು, ಮಂಜುನಾಥ ನಾಗೂರು, ಬಂದೂರು ತಾಲೂಕು ಸಂಚಾಲಕ ನಾಗರಾಜ ಉಪ್ಪುಂದ, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಎಸ್ಸೈ ವಿನಯ್, ಮುಸ್ಲಿಂ ಒಕ್ಕೂಟ ಉಪಾಧ್ಯಕ್ಷ ಶರೀಫ್ ಸಾಹೇಬ್, ಎನ್.ಎ.ನೇಜಾರು, ಸುರೇಶ್ ಹಕ್ಲಾಡಿ, ಭಾಸ್ಕರ ಕೆರ್ಗಾಲು, ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ಸತೀಶ್ ನಾಡ ಮೊದಲಾದವರು ಉಪಸ್ಥಿತರಿದ್ದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಸಂಘಟನಾ ಸಂಚಾಲಕ ಸುರೇಶ್ ಹಕ್ಲಾಡಿ ಸ್ವಾಗತಿಸಿದರು. ತಾಲೂಕು ಸಂಘಟನ ಸಂಚಾಲಕ ಸುರೇಶ್ ಮೂಡು ಬಗೆ ವಂದಿಸಿದರು.