ಯುವತಿಗೆ 2.80 ಲಕ್ಷ ರೂ. ಸೈಬರ್ ವಂಚನೆ
Update: 2024-11-04 16:35 GMT
ಉಡುಪಿ, ನ.4: ಮೊಬೈಲ್‌ನಲ್ಲಿ ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಡಿದ ಸಂದೇಶ ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಚೈತ್ರಾ (26) ಎಂಬವರಿಗೆ ದುಬಾರಿಯಾಗಿದ್ದು, ಸೈಬರ್ ವಂಚಕರ ಮೋಸಕ್ಕೆ ಬಲಿಯಾಗಿ 2.80ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸುಮಾರು ಏಳು ತಿಂಗಳ ಹಿಂದೆ ತನ್ನ ಮೊಬೈಲ್‌ನಲ್ಲಿ ಮಾಡಿದ ಮೆಸೇಜ್‌ಗೆ ವಿಡಿಯೋ ಒಂದನ್ನು ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದು, ಅದರಿಂದ ಗೇಮ್ ಡೌನ್‌ಲೋಡ್ ಮಾಡಿದ್ದರು. ಅದಕ್ಕೆ 20,000ರೂ. ಹಾಕುವಂತೆ ಬಂದ ಸೂಚನೆಯಂದೆ ಗೂಗಲ್‌ಪೇ ಮೂಲಕ ಹಣ ಹಾಕಿದ್ದರು.
ಅದೇ ರೀತಿ ಸೈಬರ್ ವಂಚಕರ ವಿವಿಧ ಖಾತೆಗಳಿಗೆ ಒಟ್ಟು 2,80,000ರೂ. ಗಳನ್ನು ಗೂಗಲ್‌ಪೇ ಮೂಲಕ ಹಾಕಿದ್ದು, ಕೊನೆಗೂ ಆನ್‌ಲೈನ್ ವಂಚಕರಿಂದ ಮೋಸ ಹೋಗಿರುವುದನ್ನು ತಿಳಿದು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.