ಹೊಳೆಗೆ ಬಿದ್ದು ಕೃಷಿಕ ಮೃತ್ಯು
Update: 2023-09-29 13:53 GMT
ಅಮಾಸೆಬೈಲು, ಸೆ.29: ಕೃಷಿ ಗದ್ದೆಗೆ ನೀರು ಹಾಯಿಸಲೆಂದು ಹೋದ ಕೃಷಿಕರೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೆ.28ರಂದು ಮಧ್ಯಾಹ್ನ ವೇಳೆ ಶೇಡಿಮನೆ ಗ್ರಾಮದ ಸಂಸೆ ಎಂಬಲ್ಲಿ ನಡೆದಿದೆ.
ಮೃತರನ್ನು ಶೇಡಿಮನೆಯ ಶೇಷ ಭೂಷಣ(57) ಎಂದು ಗುರುತಿಸಲಾಗಿದೆ. ತನ್ನ ಕೃಷಿ ಗದ್ದೆಗೆ ನೀರು ಕಡಿಮೆಯಾಗಿರು ವುದರಿಂದ ಹೊಳೆಯಿಂದ ಕಟ್ಟ ಹಾಕಿ ನೀರನ್ನು ತೋಡು ಮಾಡಿ ಗದ್ದೆಗೆ ಹರಿಸಲೆಂದು ಹೋಗಿದ್ದು, ಈ ವೇಳೆ ಅವರು ಅಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.