ಕಾರ್ಕಳ : ಮಿನಿ ಟೆಂಪೋ ಪಲ್ಟಿ; ಓರ್ವ ಮೃತ್ಯು

Update: 2025-02-12 11:22 IST
ಕಾರ್ಕಳ : ಮಿನಿ ಟೆಂಪೋ ಪಲ್ಟಿ; ಓರ್ವ ಮೃತ್ಯು
  • whatsapp icon

ಕಾರ್ಕಳ : ಮಿನಿ ಟೆಂಪೋವೊಂದು ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಪರಿಣಾಮವಾಗಿ ಒರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಳ ಮುಳ್ಳೂರು ಎಂಬಲ್ಲಿ ನಡೆದಿದೆ

ಮೃತನನ್ನು ಮಹಾರಾಷ್ಟ್ರ ಮೂಲದ ಜಿತೇಂದರ್ (38) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಪ್ರಯಾಣಿಕರೆಲ್ಲಾ ಜಾತ್ರಾ ವ್ಯಾಪಾರಿಗಳಾಗಿದ್ದು, ಕಳಸ ಜಾತ್ರೆ ಮುಗಿಸಿ ಮಂದಾರ್ತಿ ಜಾತ್ರೆಗೆ ಪ್ರಯಾಣಿಸುತ್ತಿದ್ದ ವೇಳೆ ಮಾಳ ಮುಳ್ಳೂರು ಘಾಟಿ ಕೆಳಗೆ ಪೆಟ್ರೋಲ್ ಬಂಕ್ ಬಳಿ ಬ್ರೇಕ್ ವೈಫಲ್ಯಕ್ಕೊಳಗಾಗಿ ವಾಹನ ಪಲ್ಟಿಯಾಗಿದೆ.

ನಾಲ್ವರು ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿ ಯಲ್ಲಿದ್ದ ಜಿತೇಂದರ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯ ರಾಜ(37), ಆದಿತ್ಯ (20) ಭದ್ರಾವತಿಯ ಬಾಬು (55), ಶಾಬಾಸ್ (25) ಗಂಭೀರ ಗಾಯಗೊಂಡವರು. ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News