ಕುಂದಾಪುರ | ಪಹಲ್ಗಾಮ್‌‌ನಲ್ಲಿ ಭಯೋತ್ಪಾದಕ ದಾಳಿಗೆ ಸಮುದಾಯ ಸಂಘಟನೆ ಖಂಡನೆ

Update: 2025-04-29 16:18 IST
  • whatsapp icon

ಕುಂದಾಪುರ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಸಿಲುಕಿ 28 ಮಂದಿ ಪ್ರಾಣ ಕಳೆದುಕೊಂಡಿದ್ದು, ಪ್ರವಾಸಿಗರ ಮೇಲೆ ನಡೆಸಿದ ಭಯೋತ್ಪಾದಕರ ಈ ದಾಳಿಯನ್ನು ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಖಂಡಿಸಿದೆ.

ಈ ದಾಳಿ ಆಘಾತಕಾರಿ ಮತ್ತು ನೋವಿನ ಸಂಗತಿ. ಅಮಾಯಕರ ಮೇಲಿನ ಈ ದಾಳಿ ಖಂಡನೀಯ. ಈ ಘಟನೆಗೆ ಕಾರಣರಾದವರನ್ನು ಕಂಡುಹಿಡಿದು ಅವರಿಗೆ ಶಿಕ್ಷೆ ವಿಧಿಸಬೇಕೆಂದು ಎಂದು ಸಮುದಾಯ ಸಂಘಟನೆ ಪ್ರಕಟಣೆಯಲ್ಲಿ ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News