ಎ.30ರವರೆಗೆ ಮಂಗಳೂರು ಜಂಕ್ಷನ್- ಮುಂಬೈ ರೈಲು ಥಾಣೆವರೆಗೆ ಸಂಚಾರ
Update: 2025-04-21 19:36 IST

ಉಡುಪಿ, ಎ.21: ಮುಂಬೈಯ ಸಿಎಸ್‌ಎಂಟಿ ನಿಲ್ದಾಣದ 12 ಮತ್ತು 13ನೇ ಪ್ಲಾಟ್‌ಫಾರಂನ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಹಾಗೂ ಮುಂಬೈಯ ಸಿಎಸ್‌ಎಂಟಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಎಪ್ರಿಲ್ 30ರವರೆಗೆ ಥಾಣೆಯಲ್ಲೇ ಕೊನೆಗೊಳಿಸಲು ಕೇಂದ್ರ ರೈಲ್ವೆ ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟನೆ ತಿಳಿಸಿದೆ.
ಅದೇ ರೀತಿ ಮಡಗಾಂವ್ ಜಂಕ್ಷನ್ ಹಾಗೂ ಸಿಎಸ್‌ಎಂಟಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್ ಮತ್ತು ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಸಂಚಾರ ದಾದರ್ ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದೂ ಪ್ರಕಟನೆ ತಿಳಿಸಿದೆ.