ಮಂಗಳೂರು ವಿವಿ ಅಂತರ ಕಾಲೇಜು ಅತ್ಲೆಟಿಕ್ ಚಾಂಪಿಯನ್‌ಶಿಪ್| ಮೊದಲ ದಿನ ಆಳ್ವಾಸ್ ಪಾರಮ್ಯ; ನಾಲ್ಕು ಹೊಸ ಕೂಟ ದಾಖಲೆ

Update: 2024-11-29 16:43 GMT

ಮಹಿಳೆಯರ 800ಮೀ.ನಲ್ಲಿ ಮೊದಲೆರಡು ಸ್ಥಾನಗಳೊಂದಿಗೆ ಗುರಿ ಮುಟ್ಟಿದ ಆಳ್ವಾಸ್‌ನ ದೀಪಶ್ರೀ ಮತ್ತು ರೇಖಾ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ 2024-25ನೇ ಸಾಲಿನ ಅಂತರ ಕಾಲೇಜು ಅತ್ಲೆಟಿಕ್ ಚಾಂಪಿಯನ್‌ಶಿಪ್ ಇಂದು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಗೊಂಡಿದ್ದು, ಮೊದಲ ದಿನದ ಸ್ಪರ್ಧೆಗಳಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ತನ್ನ ಪಾರಮ್ಯವನ್ನು ಸಂಪೂರ್ಣವಾಗಿ ಮೆರೆದಿದೆ.

ಮೊದಲ ದಿನ ಒಟ್ಟು 20 ಸ್ಪರ್ಧೆಗಳಲ್ಲಿ ನಾಲ್ಕು ಹೊಸ ಕೂಟ ದಾಖಲೆಗಳು ಬರೆಯಲ್ಪಟ್ಟಿವೆ. ಇವುಗಳಲ್ಲಿ ಮೂರು ಮಹಿಳೆ ಯರ ವಿಭಾಗದಲ್ಲಿ ಮೂಡಿಬಂದರೆ, ಒಂದು ಪುರುಷರ ವಿಭಾಗದಲ್ಲಿ ದಾಖಲಾಗಿದೆ.

ಎರಡು ದಿನಗಳ ಚಾಂಪಿಯನ್‌ಷಿಪ್‌ನ ಮೊದಲ ದಿನವಾದ ಇಂದು ಒಟ್ಟು 20 ಸ್ಪರ್ಧೆಗಳು ಮುಗಿದಿದ್ದು, ಪುರುಷರ ವಿಭಾಗದ ಹತ್ತು ಹಾಗೂ ಮಹಿಳೆಯರ ವಿಭಾಗದ 10 ಸ್ಪರ್ಧೆಗಳಲ್ಲೂ ಆಳ್ವಾಸ್‌ನ ಸ್ಪರ್ಧಿಗಳೇ ಚಿನ್ನದ ಪದಕಗಳನ್ನು ಕೊರಳಗೆ ತೊಡಿಸಿಕೊಂಡರು. ದಿನದ ಕೊನೆಗೆ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 127 ಅಂಕ ಸಂಗ್ರಹಿಸಿ ಅಗ್ರಸ್ಥಾನಿಯಾದರೆ, ಉಜಿರೆ ಎಸ್‌ಡಿಎಂ ಕಾಲೇಜು 19 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪುರುಷರ ವಿಭಾಗದಲ್ಲೂ ಆಳ್ವಾಸ್ 116 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ದ್ದರೆ, ಎರಡನೇ ಸ್ಥಾನದಲ್ಲಿರುವ ಎಸ್‌ಡಿಎಂ ಉಜಿರೆ 31 ಅಂಕ ಸಂಗ್ರಹಿಸಿದೆ.

ಕೂಟದ ವೇಗದ ಓಟಗಾರರು: ಆಳ್ವಾಸ್ ಕಾಲೇಜು ಮೂಡಬಿದರೆಯ ಶಿಜನ್ ಥಾಮಸ್ 100ಮೀ. ಸ್ಪ್ರಿಂಟ್‌ನ್ನು 10.61ಸೆ.ಗಳಲ್ಲಿ ಕ್ರಮಿಸುವ ಮೂಲಕ ಕೂಟದ ವೇಗದ ಓಟಗಾರನಾಗಿ ಮೂಡಿಬಂದರೆ, ಅದೇ ತಂಡದ ಪವಿತ್ರ 11.9ಸೆ. ಗಳಲ್ಲಿ ಮೊದಲಿಗರಾಗಿ ದೂರ ಕ್ರಮಿಸುವ ಮೂಲಕ ವೇಗದ ಓಟಗಾರ್ತಿ ಎನಿಸಿಕೊಂಡರು. ಆದರೆ ಇಬ್ಬರೂ ದಾಖಲೆ ಕೂಟ ದಾಖಲೆ ಉತ್ತಮ ಪಡಿಸುವಲ್ಲಿ (10.2ಸೆ., 11.1ಸೆ.) ವಿಫಲರಾದರು.

4 ಕೂಟ ದಾಖಲೆ: ದಿನದಲ್ಲಿ ನಾಲ್ಕು ಹೊಸ ಕೂಟ ದಾಖಲೆಗಳು ಬರೆಯಲ್ಪಟ್ಟವು. ಪುರುಷರ 5000ಮೀ. ಓಟದಲ್ಲಿ ಆಳ್ವಾಸ್‌ನ ಗಗನ್ 14ನಿ 10.4ಸೆ.ಗಳಲ್ಲಿ ದೂರ ಕ್ರಮಿಸುವ ಮೂಲಕ ಹೊಸ ಕೂಟ ದಾಖಲೆ ಬರೆದರು. ಈ ಮೂಲಕ ಅವರು 2021-22ರಲ್ಲಿ ಆಳ್ವಾಸ್‌ನ ಅದೀಶ್ ಮೂಡಬಿದ್ರೆಯಲ್ಲಿ ಬರೆದ 14ನಿ.14:05ಸೆ.ಗಳ ದಾಖಲೆಯನ್ನು ಮುರಿದರು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಕೆ.ಎಂ.ಶಾಲಿನಿ 20ಕಿ.ಮೀ. ನಡಿಗೆಯಲ್ಲಿ, ಸುನೀತಾ ಡಿಸ್ಕಸ್ ಎಸೆತದಲ್ಲಿ ಹಾಗೂ ಮಂಜು ಯಾದವ್ ಸ್ಟೀಪಲ್‌ಚೇಸ್‌ನಲ್ಲಿ ಹೊಸ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡರು.

ಶಾಲಿನಿ ಅವರು 20ಕಿ.ಮೀ. ನಡಿಗೆಯಲ್ಲಿ 1ಗಂಟೆ47:03ಸೆ.ಗಳಲ್ಲಿ ಪೂರ್ಣಗೊಳಿಸುವ ಮೂಲಕ 2022-23ರಲ್ಲಿ ಸೇಜಲ್ ಅನಿಲ್ ಸಿಂಗ್ ಬರೆದ 1ಗಂಟೆ53:01ಸೆ.ಗಳ ದಾಖಲೆಯನ್ನು ಮುರಿದರೆ, ಸುನೀತಾ ಅವರು 50.95ಮೀ. ದೂರ ಡಿಸ್ಕಸ್ ಎಸೆದು, ಕಳೆದ ಅನುಷಾ ಯಾದವ್ ಸ್ಥಾಪಿಸಿದ 48.45ಮೀ. ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು.

ಸ್ಟೀಪಲ್‌ ಚೇಸ್‌ನಲ್ಲಿ ಆಳ್ವಾಸ್‌ನ ಮಂಜು ಯಾದವ್ ಅವರು 10ನಿ36.0ಸೆ. ಗಳ ಹೊಸ ದಾಖಲೆ ಬರೆದರು. ಈ ಮೂಲಕ ಅವರು 2018-19ರಲ್ಲಿ ಬಿ.ಶೀತಲ್ ಝಮಾಜಿ ಬರೆದ 10ನಿ. 50.4ಸೆ.ಗಳ ದಾಖಲೆಯನ್ನು ಅಳಿಸಿ ಹಾಕಿದರು.

ಮಹಿಳೆಯರ 800ಮೀ. ಸ್ಪರ್ಧೆ ಅತ್ಯಂತ ಏಕಪಕ್ಷೀಯವಾಗಿತ್ತು. ಆಳ್ವಾಸ್‌ನ ದೀಪಶ್ರೀ ಹಾಗೂ ರೇಖಾ ಅವರಿಗೆ ಉಳಿದ ಯಾರಿಂದಲೂ ನಿಕಟ ಸ್ಪರ್ಧೆ ಎದುರಾಗಲಿಲ್ಲ. ಇವರಿಬ್ಬರು ಮೊದಲ ಎರಡು ಸ್ಥಾನಗಳೊಂದಿಗೆ ಗುರಿ ಮುಟ್ಟುವಾಗ ಮೂರನೇ ಸ್ಥಾನದಲ್ಲಿದ್ದ ಎಸ್‌ಡಿಎಂನ ಸೌಮ್ಯ ಸುಮಾರು 100ಮೀ.ನಷ್ಟು ಹಿಂದಿದ್ದರು.

ಕೂಟದ ಮೊದಲ ದಿನದ ಸ್ಪರ್ಧೆಗಳ ಫಲಿತಾಂಶ: ಪುರುಷರ ವಿಭಾಗ

100ಮೀ.: 1.ಶಿಜನ್ ಥಾಮಸ್, ಆಳ್ವಾಸ್ (10.61ಸೆ.), 2.ಮುಕುಂದನ್ ಆಳ್ವಾಸ್, 3. ಧನುಷ್ ಡಿ.ಕುಡ್ತಾರ್ಕರ್, ತೆಂಕನಿಡಿಯೂರು ಕಾಲೇಜು.

400ಮೀ.: 1.ಬಾಲಕೃಷ್ಣ, ಆಳ್ವಾಸ್ (47.0ಸೆ.), 2.ಅನುಜ್ ಯಾದವ್ ಆಳ್ವಾಸ್, 3.ಮನಿಷ್ ಕುಮಾರ್, ತೆಂಕನಿಡಿಯೂರು ಕಾಲೇಜು.

800ಮೀ.: ತುಷಾರ್ ವಸಂತ ಬೇಖಾನೆ, ಆಳ್ವಾಸ್ (1:52.3ಸೆ.), 2. ಸತ್ಯದೇವ್ ಆಳ್ವಾಸ್, 3. ಅಶ್ಲೇಷ್, ಎಸ್‌ಡಿಎಂ ಉಜಿರೆ.

5000ಮೀ.: 1.ಗಗನ್, ಆಳ್ವಾಸ್ (14:10.4ಸೆ. ಕೂಟ ದಾಖಲೆ), 2.ಅಮನ್ ಕುಮಾರ್ ಆಳ್ವಾಸ್, 3.ಮಹೇಶ್, ಎಸ್‌ಡಿಎಂ ಉಜಿರೆ.

20ಕಿ.ಮೀ. ನಡಿಗೆ: 1.ಸಚಿನ್ ಬೋಹ್ರಾ, ಆಳ್ವಾಸ್ (1:33:05.4ಸೆ), 2.ನೀರಜ್ ಕುಮಾರ್ ಆಳ್ವಾಸ್, 3.ಈಶು ಯಾದವ್ ಆಳ್ವಾಸ್.

ಶಾಟ್‌ಪುಟ್: 1.ಸಾರ್ತಕ್ ಸಿಂಗ್, ಆಳ್ವಾಸ್ (15.16ಮೀ.), 2.ಆಕಾಶ್ ಕುಂದರ್, ಎಸ್‌ಡಿಎಂ ಉಜಿರೆ, 3.ಆರ್ಯ, ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ.

ಟ್ರಿಪಲ್ ಜಂಪ್: 1.ಪ್ರದೀಪ್‌ಕುಮಾರ್, ಆಳ್ವಾಸ್ (15.65ಮೀ.), 2.ಸುರ್‌ಪ್ರೀತ್ ಸಿಂಗ್ ಆಳ್ವಾಸ್, 3.ಗಗನ್, ಎಸ್‌ಎಂಎಸ್ ಕಾಲೇಜು ಬ್ರಹ್ಮಾವರ.

ಹಾಫ್ ಮ್ಯಾರಥಾನ್: 1.ಗಗನ್, ಆಳ್ವಾಸ್ (1ಗಂ.08:57.6ಸೆ.), 2. ಚೆನ್ನಕೇಶವ, ಎಸ್‌ಡಿಎಂ ಉಜಿರೆ, 3.ಎಸ್.ಕುಮಾರ್ ಆಳ್ವಾಸ್ ಕಾಲೇಜು ಮೂಡಬಿದ್ರೆ.

ಸ್ಟೀಪಲ್‌ಚೇಸ್: 1.ರೋಹಿತ್ ಝಾ, ಆಳ್ವಾಸ್ (09:19.7ಸೆ.), 2.ನವರತ್ನ ಆಳ್ವಾಸ್, 3.ಮಿಥೇಶ್ ಎಸ್‌ಡಿಎಂ ಉಜಿರೆ.

400ಮೀ. ಮಿಕ್ಸೆಡ್ ರಿಲೇ: 1.ಆಳ್ವಾಸ್ ಕಾಲೇಜು ಮೂಡಬಿದರೆ (3:42.0ಸೆ.), 2.ಎಸ್‌ಡಿಎಂ ಕಾಲೇಜು ಉಜಿರೆ, 3.ಮಂಗಳೂರು ವಿವಿ ಕ್ಯಾಂಪಸ್ ಕೊಣಾಜೆ.

ಮಹಿಳೆಯರ ವಿಭಾಗ:

100ಮೀ.: 1.ಪವಿತ್ರ, ಆಳ್ವಾಸ್ (11.9ಸೆ.), 2. ಶೃದ್ಧಾ, ಎಂಜಿಎಂ ಕಾಲೇಜು ಉಡುಪಿ, 3. ಮಾನಸ ಅಭ್ಯಾನ, ಆಳ್ವಾಸ್ ಕಾಲೇಜು.

400ಮೀ.: 1.ಜಾದವ್ ಇಷಾ ರಾಜೇಶ್, ಆಳ್ವಾಸ್ (56.3ಸೆ.), 2.ಬೇಬಿ ಎಸ್. ಆಳ್ವಾಸ್, 3.ಚೈತ್ರಿಕಾ, ಸೈಂಟ್ ಪಿಲೋಮಿನಾ ಕಾಲೇಜು ಪುತ್ತೂರು.

800ಮೀ.: ದೀಪಶ್ರೀ, ಆಳ್ವಾಸ್ (2:16.3ಸೆ.), 2. ರೇಖಾ ಆಳ್ವಾಸ್, 3. ಸೌಮ್ಯ, ಎಸ್‌ಡಿಎಂ ಉಜಿರೆ.

5000ಮೀ.: 1.ಖುಷ್‌ಬೂ ಪಟೇಲ್, ಆಳ್ವಾಸ್ (18:09.5ಸೆ.), 2.ಪ್ರಣಾಮ್ಯ, ಆಳ್ವಾಸ್, 3.ನವ್ಯ, ಎಸ್‌ಡಿಎಂ ಉಜಿರೆ.

20ಕಿ.ಮೀ. ನಡಿಗೆ: 1.ಕೆ.ಎಂ.ಶಾಲಿನಿ, ಆಳ್ವಾಸ್ (1:47:04.0ಸೆ. ಹೊಸ ಕೂಟ ದಾಖಲೆ), 2.ವೈಷ್ಣವಿ ನೇಗಿ ಆಳ್ವಾಸ್, 3. ಸ್ವಪ್ನಾ, ಸರಕಾರಿ ಕಾಲೇಜು ವಾಮನಪದವು.

ಜಾವೆಲಿನ್ ಎಸೆತ: 1.ಸಾಕ್ಷಿ ಶರ್ಮ, ಆಳ್ವಾಸ್ (50.52ಮೀ.), 2.ನಿಧಿ ಎಂ.ಶೆಟ್ಟಿ, ಸರಕಾರಿ ಕಾಲೇಜು ತೆಂಕನಿಡಿಯೂರು, 3. ಪ್ರತೀಕ್ಷಾ ಪಟೇಲ್, ಆಳ್ವಾಸ್ ಮೂಡಬಿದ್ರೆ.

ಡಿಸ್ಕಸ್ ಎಸೆತ: 1.ಸುನೀತಾ, ಆಳ್ವಾಸ್ (50.95ಮೀ. ಹೊಸ ಕೂಟ ದಾಖಲೆ), 2.ಮಾಧುರ‌್ಯ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಅಜ್ರಕಾಡು ಉಡುಪಿ, 3.ಭಾರತಿ ಕುಮಾರಿ, ಆಳ್ವಾಸ್.

ಟ್ರಿಪಲ್ ಜಂಪ್: 1.ತಮನ್ನಾ, ಆಳ್ವಾಸ್ (11.77ಮೀ.), 2. ಪ್ರಿಯಾಂಕ ಆಳ್ವಾಸ್, 3. ರಕ್ಷಿತಾ, ಎಸ್‌ಡಿಎಂ ಕಾಲೇಜು ಉಜಿರೆ.

ಹಾಫ್ ಮ್ಯಾರಥಾನ್: 1.ಬಸಂತಿ ಕುಮಾರಿ, (1ಗಂ.23:06.2ಸೆ.), 2. ಜ್ಯೋತಿ ಆಳ್ವಾಸ್, 3.ಪ್ರಣಮ್ಯ, ಆಳ್ವಾಸ್.

ಸ್ಟೀಪಲ್‌ಚೇಸ್: 1.ಮಂಜು ಯಾದವ್, ಆಳ್ವಾಸ್ (10:36.0ಸೆ. ಹೊಸ ಕೂಟ ದಾಖಲೆ), 2. ಸ್ಪಂದನಾ ಆಳ್ವಾಸ್, 3. ಸುಜಾತ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಅಜ್ಜರಕಾಡು ಉಡುಪಿ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News