ಮಣಿಪಾಲ: ಡಾ.ವಸುಂಧರಾ ದೊರೆಸ್ವಾಮಿ ಕಿತ್ತೂರು ರಾಣಿ ಚೆನ್ನಮ್ಮ ನೃತ್ಯ ರೂಪಕ

Update: 2024-08-21 14:32 GMT

ಉಡುಪಿ, ಆ.21: ಮಣಿಪಾಲ ಮಾಹೆ ವಿವಿಯ ಸಾಂಸ್ಕೃತಿಕ ವಿಭಾಗ ನಾಳೆ ಆ.22ರ ಗುರುವಾರ ಸಂಜೆ 6:30ಕ್ಕೆ ಡಾ. ಟಿ.ಎಂ.ಎ ಪೈ ಸಭಾಂಗಣದಲ್ಲಿ ಹಿರಿಯ ನೃತ್ಯಕಲಾವಿದೆ, ನೃತ್ಯ ಗುರು ಡಾ. ವಸುಂಧರಾ ದೊರೆಸ್ವಾಮಿ ಅವರ ‘ಕಿತ್ತೂರು ರಾಣಿ ಚೆನ್ನಮ್ಮ’ ಏಕವ್ಯಕ್ತಿ ನೃತ್ಯನಾಟಕ ಪ್ರದರ್ಶನವನ್ನು ಆಯೋಜಿಸಿದೆ.

ಪ್ರೊ.ಜ್ಯೋತಿ ಶಂಕರ್ ಅವರು ರಚಿಸಿ ವಿದ್ವಾನ್ ಶ್ರೀವತ್ಸ ಅವರ ಸಂಗೀತ ಸಂಯೋಜನೆ ಹೊಂದಿರುವ ಈ ನೃತ್ಯ ನಾಟಕ ದಲ್ಲಿ ಡಾ.ವಸುಂಧರಾ ಅವರ ನೃತ್ಯ- ನಾಟಕ- ಸಮರಕಲೆಗಳ ಸಿದ್ಧಿಯ ಸಮನ್ವಯವನ್ನು ಕಾಣಬಹುದು. ದಕ್ಷಿಣ ಕನ್ನಡದ ಮೂಡಬಿದರೆಯವರಾದ ಡಾ.ವಸುಂಧರಾ, ಮೈಸೂರಿನಲ್ಲಿ ಪ್ರದರ್ಶನ ಕಲೆಗಳ ಕೇಂದ್ರವನ್ನು ಸ್ಥಾಪಿಸಿ ಕಳೆದ ನಾಲ್ಕು ದಶಕಗಳಿಂದ ನಾಡಿನ ಹಿರಿಯ-ಕಿರಿಯ ಕಲಾವಿದರಿಗೆ ಕಲಾ ವೇದಿಕೆಯನ್ನು ಒದಗಿಸುತಿದ್ದಾರೆ.

ಅಂತಾರಾಷ್ಟ್ರೀಯ ಖ್ಯಾತಿಯ ಶಾಸ್ತ್ರೀಯ, ಭರತನಾಟ್ಯ ಹಾಗೂ ಸೃಜನಶೀಲ ಕಲಾವಿದೆಯಾಗಿ ಗುರುತಿಸಿಕೊಂಡಿರುವ 75ರ ಹರೆಯದ ಡಾ.ವಸುಂಧರಾ ಈಗಲೂ ನಿರಂತರ ಪ್ರದರ್ಶನ, ಕಲಾಸಂಯೋಜನೆ, ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಪ್ರಬುದ್ಧ ಕಲಾವಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News