ಮಣಿಪಾಲ: ಇಂದಿರಾ ಕ್ಯಾಂಟೀನ್‌ಗೆ ಸಚಿವರ ಭೇಟಿ, ಪರಿಶೀಲನೆ
Update: 2024-08-17 14:14 GMT
ಉಡುಪಿ, ಆ.17: ರಾಜ್ಯ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಇಂದು ಮಣಿಪಾಲದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಕ್ಯಾಂಟೀನ್‌ನ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಸೇರಿದಂತೆ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿದರು.
ಇಂದಿರಾ ಕ್ಯಾಂಟೀನ್ ಪರಿಸರವನ್ನು ಪರಿಶೀಲಿಸಿದ ಸಚಿವರು ಕ್ಯಾಂಟೀನ್ ಒಳಗೂ ಕಿಚನ್ ಸೇರಿದಂತೆ ಎಲ್ಲಾ ಕಡೆಗೂ ತೆರಳಿ ಗ್ರಾಹಕರಿಗೆ ನೀಡುವ ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಪ್ರಮಾಣಗಳ ತಪಾಸಣೆ ನಡೆಸಿದರು. ಸಿಬ್ಬಂದಿ ಗಳೊಂದಿಗೂ ವಿವಿಧ ವಿಷಯಗಳ ಕುರಿತು ಮಾಹಿತಿ ಗಳನ್ನು ಕೇಳಿ ತಿಳಿದುಕೊಂಡರು. ಅವರಿಗೆ ಕೆಲವಾರು ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ, ಆಪ್ತ ಕಾರ್ಯದರ್ಶಿ ಡಾ.ಕೆ. ಮುರುಳಿಧರ್, ಪೌರಾಯುಕ್ತ ರಾಯಪ್ಪ, ಸ್ಥಳೀಯ ಮುಖಂಡರುಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.