ಮಣಿಪಾಲ: ಛಾಯಾಚಿತ್ರ ಪ್ರದರ್ಶನ, ಕಾರ್ಯಾಗಾರ

Update: 2024-09-03 13:52 GMT

ಮಣಿಪಾಲ, ಸೆ.3: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ (ಮಾಹೆ) ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗ, ಸದ್ಭಾವ ಕೇಂದ್ರ ಹಾಗೂ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲ್ಯಾನಿಂಗ್ ವಿಭಾಗಗಳ ಸಹಭಾಗಿತ್ವ ದಲ್ಲಿ ವಿಶ್ವ ಛಾಯಾಗ್ರಹಣ ದಿನವನ್ನು ಇತ್ತೀಚೆಗೆ ಆಚರಿಸಿತು.

ಈ ಸಂದರ್ಭದಲ್ಲಿ ಮಾಹೆ ಆವರಣದ ಬದುಕು ‘ಲೈಫ್ ಆನ್ ದಿ ಮಾಹೆ ಕ್ಯಾಂಪಸ್’ ವಿಷಯ ಕೇಂದ್ರಿತವಾಗಿ ವಿವಿಧ ಕಾರ್ಯಕ್ರಮಗಳು ಮತ್ತು ಛಾಯಾಚಿತ್ರಪ್ರದರ್ಶನಗಳು ಜರಗಿದವು. ನಿಕಾನ್ ಇಂಡಿಯದ ಪ್ರಾಯೋಜ ಕತ್ವದಲ್ಲಿ ನಿಕಾನ್ ಕೆಮರಾದ ಬಳಕೆದಾರರಿಗಾಗಿ ಛಾಯಾಗ್ರಹಣ ಶಿಬಿರವನ್ನು ಸಹ ಆಯೋಜಿಸಲಾಗಿತ್ತು.

ಶಿಬಿರದ ಪ್ರಯೋಜನವನ್ನು ನಿಕಾನ್ ಕೆಮರಾ ಬಳಸುವ ವಿದ್ಯಾರ್ಥಿಗಳು ಹಾಗೂ ಇತರ ಆಸಕ್ತರು ಪಡೆದುಕೊಂಡರು. ನೂರಕ್ಕೂ ಅಧಿಕ ಮಂದಿ ಈ ತರಬೇತಿ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅಲ್ಲದೇ ಛಾಯಾಚಿತ್ರ ಕಾರ್ಯಾ ಗಾರವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದಲ್ಲಿ ಛಾಯಾಚಿತ್ರಗ್ರಹಣ ತಂತ್ರಗಾರಿಕೆ, ಉಪಕರಣಗಳ ನಿಭಾವಣೆ, ಸೃಜನಶೀಲತೆಯೊಂದಿಗೆ ಬಳಕೆ, ಛಾಯಾಗ್ರಹಣದ ಕೌಶಲ ಇತ್ಯಾದಿಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ಮಾಹೆ ಕ್ಯಾಂಪಸ್ ಸುತ್ತಮುತ್ತಲಿನ ಬದುಕಿಗೆ ಸಂಬಂಧಿಸಿದ ಛಾಯಾಚಿತ್ರಪ್ರದರ್ಶನ ಸಹೃದಯರ ಗಮನಸೆಳೆಯಿತು.

ಸಮಾರೋಪ ಸಮಾರಂಭದಲ್ಲಿ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ನಿರ್ದೇಶಕ ಡಾ. ಕಲ್ಯಾಣ್ ಕುಮಾರ್ ಮುಖರ್ಜಿ, ಸಾರ್ವಜನಿಕ ಸಂಪರ್ಕ, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ಉಪನಿರ್ದೇಶಕ ಸಚಿನ್ ಕಾರಂತ್, ಸುರೇಶ್ ಕೋಟ್ಯಾನ್, ಮಿಥುನ್‌ರಾಜ್, ಟಿ.ಎನ್. ತ್ರಿವಿಕ್ರಮ್, ನಿಕಾನ್ ಇಂಡಿಯದ ಅರುಣ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News