ಮಣಿಪಾಲ: ಫ್ಲಾಟ್ ನಲ್ಲಿ ಸಿಕ್ಕಿಹಾಕಿಕೊಂಡ ಯುವತಿ; ಅಗ್ನಿಶಾಮಕ ದಳದಿಂದ ರಕ್ಷಣೆ
Update: 2024-07-16 13:41 IST

ಮಣಿಪಾಲ: ಫ್ಲ್ಯಾಟ್ ವೊಂದರಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿನಿಯನ್ನು ಅಗ್ನಿಶಾಮಕ ದಳದ ಸಿಬಂದಿ ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಕೃತಿ ಗೋಯಲ್(25) ರಕ್ಷಣೆಗೊಳಗಾದ ವಿದ್ಯಾರ್ಥಿನಿ. ಮನೆಯ ಡೋರ್ ಒಳಗಡೆ ಲಾಕ್ ಆದ ಕಾರಣ ಹೊರ ಬರಲಾಗದೇ ಸಿಕ್ಕಿಹಾಕಿಕೊಂಡ ಯುವತಿ, ರಕ್ಷಣೆಗಾಗಿ ಉಡುಪಿ ಜಿಲ್ಲಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದ ದಳದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಫ್ಲ್ಯಾಟಿನ 4ನೇ ಮಹಡಿಯಲ್ಲಿ ಸಿಕ್ಕಿ ಹಾಕಿಕೊಂಡ ಯುವತಿಯನ್ನು ಕೊಠಡಿಯ ಹಿಂಭಾಗದ ಕಿಟಕಿ ಒಡೆದು ರಕ್ಷಿಸಿದ್ದಾರೆ.