ಗ್ಯಾರಂಟಿ ಕುರಿತ ಶೋಭಾ ಕರಂದ್ಲಾಜೆ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸವಾಲು

Update: 2023-09-02 15:19 GMT

ಶೋಭಾ ಕರಂದ್ಲಾಜೆ - ಲಕ್ಷ್ಮೀ ಹೆಬ್ಬಾಳ್ಕರ್

ಪಡುಬಿದ್ರಿ, ಸೆ.2: ರಾಜ್ಯ ಸರಕಾರದ ಉಚಿತ ಯೋಜನೆಗಳನ್ನು ಶುಕ್ರವಾರ ಟೀಕಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ ಜಿಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದು, ಧೈರ್ಯವಿದ್ದರೆ ಪತ್ರಿಕಾಗೋಷ್ಠಿ ಕರೆದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯನ್ನು ರದ್ದುಮಾಡುವಂತೆ ಹೇಳಿ ಎಂದು ಸವಾಲು ಹಾಕಿದ್ದಾರೆ.

ಉಚ್ಚಿಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು, ಶೋಭಾ ಕರಂದ್ಲಾಜೆ ಅವರೇ, ನಿಮಗೆ ಧೈರ್ಯ ಇದ್ದರೆ ಉಡುಪಿಗೆ ಬಂದು ಪ್ರೆಸ್ ಮೀಟ್ ಕರೆದು ರಾಜ್ಯ ಸರಕಾರದ ಗ್ಯಾರಂಟಿಗಳನ್ನು ರದ್ದು ಮಾಡುವಂತೆ ಹೇಳಿ ಎಂದು ಸವಾಲು ಹಾಕಿದರು.

ಶೋಭಾ ಅವರು ನನಗಿಂತ ಹಿರಿಯರು. ಎರಡು- ಮೂರು ಸಲ ಮಂತ್ರಿಯೂ ಆಗಿದ್ದಾರೆ. ಅವರಿಗೆ ವಾಸ್ತವ ತಿಳಿದಿದೆ. ಈಗ ಚುನಾವಣೆ ಹತ್ತಿರವಿದೆ. ಹೀಗಾಗಿ ವಿರೋಧ ಪಕ್ಷದವರಾಗಿ ನಮ್ಮ ಯೋಜನೆಗಳನ್ನು ಟೀಕೆ ಮಾಡ್ತಾರೆ. ಆದರೆ ನೀವು ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಪ್ರೆಸ್‌ಮೀಟ್ ಕರೆಯಿರಿ ಎಂದರು.

ಇಸ್ರೋಗೆ ಅಭಿನಂದನೆ: ಇಸ್ರೋದ ಯಶಸ್ವಿ ಆದಿತ್ಯ ಯಾನಕ್ಕೆ ಹೆಬ್ಬಾಳ್ಕರ್ ಅಭಿನಂದಿಸಿದರು. ಇಸ್ರೋ ನಮ್ಮ ದೇಶದ ಹೆಮ್ಮೆ. ಚಂದ್ರನ ಮೇಲೆ ಪತಾಕೆ ಹಾರಿಸಿದ ನಮ್ಮ ವಿಜ್ಞಾನಿಗಳು ಈಗ ಸೂರ್ಯನ ವ್ಯಾಪಕ ಅಧ್ಯಯನಕ್ಕೆ ಮುಂದಾಗಿದ್ದು, ಅವರಿಗೆ ಶುಭವಾಗಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಶುಭ ಹಾರೈಸಿದರು.

ಇಸ್ರೋಗೆ ಭಾರತದ 130 ಕೋಟಿ ಜನರ ಹಾರೈಕೆ ಇದೆ. ಈ ಪ್ರಯತ್ನದಲ್ಲೂ ಇಸ್ರೋ ಯಶಸ್ಸು ಸಾಧಿಸಲಿದೆ. ಅವರಿಗೆ ರಾಜ್ಯದ ಜನತೆಯ ಪರವಾಗಿ ಅಭಿನಂದನೆಗಳು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News