ಬೈಂದೂರು ಪ.ಪಂ.: ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ

Update: 2024-09-27 14:12 GMT

ಉಡುಪಿ, ಸೆ.27: ನಗರಾಭಿವೃದ್ಧಿ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ಗಳ ಸಮೀಕ್ಷೆ ನಡೆಸಲು ಅಕ್ಟೋಬರ್ 1ರಂದು ಬೈಂದೂರು ಪಟ್ಟಣ ಪಂಚಾಯತ್ ಕಚೇರಿ, ಅ.3 ರಂದು ಬೈಂದೂರು ಗ್ರಾಮದ ಗಂಗನಾಡು ಅಂಗನವಾಡಿ, ಅ.4ರಂದು ತಗ್ಗರ್ಸೆ ಅಂಗನವಾಡಿ ಮತ್ತು ಅ.5ರಂದು ಪಡುವರಿ ಸೋಮೇಶ್ವರ ಅಂಗನವಾಡಿಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಗುರುತಿಸುವಿಕೆಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವ, ಅನೈರ್ಮಲ್ಯ ಶೌಚಾಲಯ ಗಳಿಂದ ಹೊರಹೋಗಿ ತೆರೆದ ಚರಂಡಿಯಲ್ಲಿ ಸಂಗ್ರಹವಾಗುವ ಮಾನವ ಮಲವನ್ನು ಸ್ವಚ್ಛಗೊಳಿಸುವ ಹಾಗೂ ಶೌಚಾಲಯ ಮಲ ಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊ ಳಿಸುವ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯದಲ್ಲಿ ತೊಡಗಿರುವವರು ಮೇಲ್ಕಂಡ ಸ್ಥಳಗಳಲ್ಲಿ ಆಯೋಜಿಸಿರುವ ಸಮೀಕ್ಷೆ ಮತ್ತು ಗುರುತಿಸುವಿಕೆಯ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಕುಟುಂಬದ ಸದಸ್ಯರನ್ನು ಒಳಗೊಂಡ ಭಾವಚಿತ್ರ, ಬ್ಯಾಂಕ್ ಖಾತೆಯ ಪ್ರತಿ, ಆಧಾರ್ ಪ್ರತಿ ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಕಾರ್ಯನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯ ಸ್ಥಳದ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬಹುದು.

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಬೈಂದೂರು ಪಟ್ಟಣ ಪಂಚಾಯತ್ ಕಚೇರಿ ಅಥವಾ ಮೊ.ನಂ:7019166640ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News