ಪಟ್ಟಣ ಸಹಕಾರ ಬ್ಯಾಂಕ್ ಕಮಿಟಿ ಸದಸ್ಯರು, ಸಿಇಓಗಳಿಗೆ ರಾಜ್ಯಮಟ್ಟದ ವಿಚಾರ ಸಂಕಿರಣ

Update: 2024-09-27 15:48 GMT

ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳವು ಉಡುಪಿ ಎಲ್‌ಐಸಿ ನೌಕರರ ಸಹಕಾರ ಬ್ಯಾಂಕಿನ ಸಹಯೋಗ ದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಇಂದು ಉಡುಪಿಯ ಲಿಕೋ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಲಾಗಿತ್ತು.

ವಿಚಾರ ಸಂಕಿರಣವನ್ನು ಉದ್ಭಾಟಿಸಿದ ಉಡುಪಿ ಶಾಸಕ ಮತ್ತು ಮಹಾಲಕ್ಷ್ಮಿ ಸಹಕಾರ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕಿಗೆ ಸರಿಸಮನಾಗಿ ಕಾರ್ಯ ನಿರ್ವಸು ತ್ತಿವೆ. ಅದರಲ್ಲಿ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯು ರಾಷ್ಟ್ರೀಕೃತ ಬ್ಯಾಂಕಿಗಳಿಗೆ ಮೈಲುಗಲ್ಲಾಗಿದೆ. ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಹೆಚ್ಚಿನ ರೀತಿಯಲ್ಲಿ ತರಬೇತಿಗಳಿಗೆ ನಿಯೋಜಿಸಿ ಮಹಾಮಂಡಳವು ಏರ್ಪಡಿಸುವ ಕಾರ್ಯಕ್ರಮ ದಲ್ಲಿ ಭಾಗವಸಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಮಹಾಮಂಡಳದ ನಿರ್ದೇಶಕರು ಹಾಗೂ ವಿಶ್ವಕರ್ಮ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹರೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಮಹಾಮಂಡಳದ ನಿರ್ದೇಶಕ ರಾಜಕುಮಾರ ಬಾದವಾಡಿ, ಶಿಕ್ಷಣ ಸಲಹಾ ಸಮಿತಿ ಸದಸ್ಯ ಷಣ್ಮುಕಪ್ಪ ಮುಚ್ಚಂಡಿ ಮಾತನಾಡಿದರು.

ಮಹಾಮಂಡಳದ ನಿರ್ದೇಶಕ ಜಯನಂದ ಹೊಸಕೋಟೆ, ಉಡುಪಿ ಲಿಕೋ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣ ಹಾಗೂ ಉಡುಪಿ ಟೌನ್ ಬ್ಯಾಂಕಿನ ಅಧ್ಯಕ್ಷ ಜಯಪ್ರಕಾಶ ಕೆದ್ಲಾಯ ಮತ್ತು ಉಡುಪಿ ನಾರಾಯಣಗುರು ಸಹಕಾರ ಬ್ಯಾಂಕಿನ ಹರೀಶ್ಚಂದ್ರ ಅಮೀನ್, ಮಹಾಮಂಡಳದ ಬ್ಯಾಂಕಿಂಗ್ ಸಲಹೆಗಾರ ಸುಧಾಕರ ಭಟ್, ಉಪನ್ಯಾಸಕ ತಿಪ್ಪೇಶ ಅಂಗಡಿ, ಮಹಾ ಮಂಡಳದ ಪ್ರಭಾರ ಅಧೀಕ್ಷಕ ಆರ್.ಎಚ್.ಕುಮಾರ್ ಉಪಸ್ಥಿತರಿದ್ದರು.

ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಂಡಲೀಕ ಎನ್.ಕೆರೂರೆ ಸ್ವಾಗತಿಸಿದರು. ಲಿಕೋ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶಶಿಕಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News