ಉಡುಪಿ: ವಿಬಿಸಿಎಲ್‌ನಲ್ಲಿ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

Update: 2024-11-23 14:19 GMT

ಉಡುಪಿ: ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾ ವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್‌ಕ್ರಾಸ್ ಘಟಕದ 2024-25ನೇ ಸಾಲಿನ ಉದ್ಘಾಟನೆ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಉಡುಪಿಯ ಭಾರತೀಯ ರೆಡ್ ಕ್ರಾಸ್ ಅಧ್ಯಕ್ಷ ಬಸ್ರೂರು ರಾಜೀವ ಶೆಟ್ಟಿ, ರಾಷ್ಟ್ರೀಯ ಸೇವಾಯೋಜನೆಯ ರಾಜ್ಯ ಯೋಜ ನಾಧಿಕಾರಿ ಡಾ. ಗಣನಾಥ್ ಎಕ್ಕಾರು ಹಾಗೂ ಕಾರ್ಕಳದ ವಕೀಲ ಸರ್ವಜ್ಞ ತಂತ್ರಿ ಅವರು ಉದ್ಘಾಟನೆ ನೆರವೇರಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿರ್ದೇಶಕಿ ಪ್ರೊ.ಡಾ. ನಿರ್ಮಲ ಕುಮಾರಿ ಕೆ. ಮಾತನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುರೇಖಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಯೋಜನಾಧಿಕಾರಿ ಎನ್ನೆಸ್ಸೆಸ್ ಘಟಕದ ಡಾ.ಸಿ.ಬಿ ನವೀನ್‌ಚಂದ್ರ ಹಾಗೂ ರೆಡ್‌ಕ್ರಾಸ್ ಘಟಕದ ಆನ್ಸಿ ಪ್ಲೋರಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರೆಡ್‌ಕ್ರಾಸ್ ವಿದ್ಯಾರ್ಥಿ ಕಾರ್ಯದರ್ಶಿ ಮಂಜುನಾಥ್ ಸ್ವಾಗತಿಸಿ ದರು. ಎನ್ನೆಸ್ಸೆಸ್ ಕಾರ್ಯದರ್ಶಿ ಅಶೋಕ ಆರ್ ವಂದಿಸಿದರು. ಬಸವರಾಜ್ ಮತ್ತು ನಂದನ್ ರೈಮಂಡ್ ಮಚಾಡೊ ಅತಿಥಿಗಳನ್ನು ಪರಿಚಯಿಸಿ,ಗಣೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News