ಮಣಿಪಾಲ: ಮಾಧವಕೃಪಾ ಶಾಲೆಯಲ್ಲಿ ಎಐಸಿಎಸ್ ಸಂಸ್ಕೃತಿ ಸಮಾಗಮ
ಮಣಿಪಾಲ: ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಡುಪಿ ಜಿಲ್ಲೆಯ ಎಐಸಿಎಸ್ ಒಕ್ಕೂಟದ ಶಾಲೆಗಳ ‘ಸಂಸ್ಕೃತಿ ಸಮಾಗಮ’ ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಇತೀಚೆಗೆ ಶಾಲೆಯಲ್ಲಿ ನಡೆಯಿತು.
ಕಾಯಕ್ರಮವನ್ನು ಮಂಗಳೂರಿನ ಮಣಿಪಾಲ ಶಾಲೆಯ ಪ್ರಾಂಶುಪಾಲೆ ಶ್ರೀಲತಾ ಆಳ್ವಾ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಯನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು ಇದನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಶಾಲಾ ಸಂಚಾಲಕಿ ರಾಧಿಕಾ ಪೈ ಶುಭ ಹಾರೈಸಿದರು.ಶಾಲಾ ಪ್ರಾಂಶುಪಾಲೆ ಸ್ವಾತಿ ಕುಲಕರ್ಣಿ ಸ್ವಾಗತಿಸಿದರೆ ಶಾಲಾ ಮುಖ್ಯೋಪಾಧ್ಯಾಯಿನಿ ಆಶಾ ನಾಯಕ್ ವಂದಿಸಿದರು.
ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೋದಾರ್ ಶಾಲೆಯ ಪ್ರಾಂಶುಪಾಲ ಉದಯಕುಮಾರ ಎ.ಎನ್. ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.ಶಾಲಾ ಉಪಪ್ರಾಂಶುಪಾಲೆ ಜ್ಯೋತಿ ಸಂತೋಷ್ ಅತಿಥಿ ಗಳನ್ನು ಸ್ವಾಗತಿಸಿದರು. ಶಕಿಲಾಕ್ಷಿ ಕೃಷ್ಣ ವಂದಿಸಿದರು.
ಸ್ಪರ್ಧೆಯ ಫಲಿತಾಂಶ: ಜೂನಿಯರ್ ವಿಭಾಗ
ತುಳು ನಲಿಕೆ ಸ್ಪರ್ಧೆ: 1.ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆ ಶಿರ್ವ, 2.ಆನಂದತೀರ್ಥ ವಿದ್ಯಾಲಯ ಪಾಜಕ, 3. ಮಾಧವಕೃಪಾ ಶಾಲೆ ಮಣಿಪಾಲ. ಮಾಸ್ಕ್ ಮೇಕಿಂಗ್ ಸ್ಪರ್ಧೆ:1.ಚಿರಾಲಿ, ಡಾನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆ ಶಿರ್ವ, 2.ಅಭಿರಾಮ್, ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ, 3. ಅಕ್ಷತಾ ಜಿ ಪೈ, ಓಕ್ ವುಡ್‌ಇಂಡಿಯನ್ ಸ್ಕೂಲ್. ಏಕಪಾತ್ರಾಭಿನಯ: 1.ಶ್ರೇಯಸ್‌ಆರ್, ಜಿ.ಎಮ್.ವಿದ್ಯಾನಿಕೇತನ ಶಾಲೆ, 2.ಚೈತಾಲಿ, ಕ್ರೈಸ್ಟ್ ಶಾಲೆ ಮಣಿಪಾಲ, 3. ಸುವನ್, ಮಾಧವ ಕೃಪಾ ಶಾಲೆ ಮಣಿಪಾಲ.
ಸೀನಿಯರ್ ವಿಭಾಗ: ಫ್ಯೂಝನ್ ಫೀಟ್-1.ಆನಂದತೀರ್ಥ ವಿದ್ಯಾಲಯ, ಪಾಜಕ, 2.ಶಾರದಾ ರೆಸಿಡೆನ್ಶಿಯಲ್ ಶಾಲೆ ಕುಂಜಿಬೆಟ್ಟು ಉಡುಪಿ, 3. ಟ್ರಿನಿಟಿ ಸೆಂಟ್ರಲ್ ಶಾಲೆ. ಪುನಿ ಆರ್ಟ್: 1.ಸ್ವಸ್ತಿ ಪೂಜಾರಿ, ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆ, 2. ಸೌಪರ್ಣಿಕಾ, ಸೈಂಟ್ ಮೇರೀಸ್ ಆಂಗ್ಲ ಮಾಧ್ಯಮ ಶಾಲೆ ಕನ್ನರ್ಪಾಡಿ ಉಡುಪಿ, 3. ಸಾನ್ವಿ ಜೆ.ಆಚಾರ್ಯ, ಆನಂದತೀರ್ಥ ವಿದ್ಯಾಲಯ ಪಾಜಕ. ವಸ್ತ್ರ ವಿನ್ಯಾಸ ಸ್ಪರ್ಧೆ: 1.ಗ್ರೀಶ್ಮಾ ಎಸ್ ಮಾಧವಕೃಪಾ ಶಾಲೆ ಮಣಿಪಾಲ, 2.ಅಮೇಲಿಯ ಎಂ.ಸೋನ್ಸ್, ಡಾನ್ ಬಾಸ್ಕೊ ಇಂಗ್ಲಿಷ್ ಮಾಧ್ಯಮ ಶಾಲೆ ಶಿರ್ವ, 3.ಸ್ಠೃತಿ ಸುಧೇಶ್ ಶೆಟ್ಟಿ ಲೂರ್ಡ್ಸ್ ಇಂಗ್ಲಿಷ್ ಮಾಧ್ಯಮ ಶಾಲೆ.
ಸಮಗ್ರ ಚಾಂಪಿಯನ್ಸ್: ಜೂನಿಯರ್ ವಿಭಾಗ: 1.ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆ ಶಿರ್ವ, 2.ಜಿ.ಎಮ್. ವಿದ್ಯಾನಿಕೇತನ ಶಾಲೆ ಬ್ರಹ್ಮಾವರ. ಸೀನಿಯರ್ ವಿಭಾಗ: 1.ಆನಂದತೀರ್ಥ ವಿದ್ಯಾಲಯ ಪಾಜಕ, 2. ಲೂರ್ಡ್ಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಮಾಧವ ಕೃಪಾ ಶಾಲೆ ಮಣಿಪಾಲ.