ಕ್ಯಾನ್ಸರ್ ರೋಗದ ಭಯ: ಇಬ್ಬರು ಆತ್ಮಹತ್ಯೆ

Update: 2024-11-26 22:21 IST

ಹೆಬ್ರಿ: 15 ದಿನಗಳಿಂದ ಅನಾರೋಗ್ಯದಿಂದ ಇದ್ದು, ಪರೀಕ್ಷಿಸಿದ ವೈದ್ಯರು ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆಯಾಗಿರುವುದಾಗಿ ತಿಳಿಸಿದ ಕಾರಣದಿಂದ ಮನನೊಂದ ಮುದ್ರಾಡಿ ಗ್ರಾಮದ ಜಲಜ (85) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೋಮವಾರ ರಾತ್ರಿ 10ರಿಂದ ಇಂದು ಬೆಳಗಿನ ಜಾವ 6ಗಂಟೆ ನಡುವಿನ ಅವಧಿಯಲ್ಲಿ ಮನೆ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ಇನ್ನೊಂದು ಘಟನೆಯಲ್ಲಿ ಚೇರ್ಕಾಡಿ ಗ್ರಾಮದ ಸುರೇಶ್ (56) ಎಂಬವರಿಗೆ ಅನ್ನನಾಳದಲ್ಲಿ ಗುಳ್ಳೆಹಾಗೂ ದುರ್ಮಾಂಸ ಮತ್ತು ಕೆನ್ನೆಯಲ್ಲಿ ಗಡ್ಡೆಯಾಗಿದ್ದು, ವೈದ್ಯರಲ್ಲಿ ತಪಾಸಣೆ ಮಾಡಿದಾಗ ಅನ್ನನಾಳ ಹಾಗೂ ಧ್ವನಿಪೆಟ್ಟಿಗೆ ತೆಗೆಯಬೇಕು ಹಾಗೂ ಗಂಟಲು ಕ್ಯಾನ್ಸರಿಗೆ ತುತ್ತಾಗಿ ರುವುದಾಗಿ ತಿಳಿಸಿದ್ದು, ಇದರಿಂದ ಮನನೊಂದು ಮಂಗಳವಾರ 10ರಿಂದ 12 ಗಂಟೆ ನಡುವಿನ ಅವಧಿಯಲ್ಲಿ ಮನೆಯ ಮಾಡಿಗೆ ನೈಲಾನ್ ರೋಪ್ ಬಿಗಿದು ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News