ಹುಲ್ಲು ತರಲು ಹೋದ ಮಹಿಳೆ ಮೃತ್ಯು

Update: 2024-11-29 15:25 GMT

ಮಣಿಪಾಲ: ಹುಲ್ಲು ತರಲು ಗುಡ್ಡಕ್ಕೆ ಹೋದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಪರ್ಕಳ ಸಮೀಪದ ಸರಳಬೆಟ್ಟು ವಾರ್ಡಿನ ನೆಹರು ನಗರ ಎಂಬಲ್ಲಿ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಪುಷ್ಪಾನಾಯ್ಕ್(66) ಎಂದು ಗುರುತಿಸಲಾಗಿದೆ. ಇವರು ಗುರುವಾರ ಸಂಜೆ ಸಾಕು ದನಗಳಿಗೆ ಹುಲ್ಲು ತರಲೆಂದು ಮನೆಯ ಪಕ್ಕದ ಗುಡ್ಡಕ್ಕೆ ಹೋದವರು ನಾಪತ್ತೆಯಾಗಿದ್ದರು. ಮನೆಯವರು ರಾತ್ರಿ ಹುಡುಕಾಡಿದ್ದು ಎಲ್ಲಿಯೂ ಪತ್ತೆ ಆಗಿರಲಿಲ್ಲ.

ಇಂದು ಬೆಳಗ್ಗೆ ಅವರ ಮೃತದೇಹವು ಮನೆ ಎದುರಿನ ಗುಡ್ಡೆಯಲ್ಲಿ ಪತ್ತೆಯಾಗಿದೆ. ಇವರು ಕಾಲು ಜಾರಿ ಬಿದ್ದು ಮೃತಪಟ್ಟಿರ ಬಹುದೆಂಬ ಶಂಕೆ ಇದ್ದು, ಕೆಲವರು ಈ ಭಾಗದಲ್ಲಿರುವ ಚಿರತೆ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News