ನಂದಿಕೂರು ನಿಲ್ದಾಣದಲ್ಲಿ ಕಾಮಗಾರಿ: ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಉಡುಪಿ: ಕೊಂಕಣ ರೈಲು ಮಾರ್ಗದ ನಂದಿಕೂರು ರೈಲ್ವೆ ನಿಲ್ದಾಣದಲ್ಲಿ ಕೆಲವು ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ ಡಿ.14ರವರೆಗೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಡಿ.12ರ ಗುರುವಾರ ಬೆಳಗ್ಗೆ 7:10ರಿಂದ 9:40ರವರೆಗೆ ಎರಡೂವರೆ ಗಂಟೆಗಳ ಕಾಲ ಕಾಮಗಾರಿ ನಡೆಯಲಿದ್ದು, ಈ ವೇಳೆ ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ರೈಲು 10 ನಿಮಿಷ ವಿಳಂಬಗೊಳ್ಳಲಿದೆ.
ಡಿ.13ರ ಶುಕ್ರವಾರ ಬೆಳಗ್ಗೆ 7:10ರಿಂದ 9:40ವರೆಗೆ ಂರಡೂವರೆ ಗಂಟೆಗಳ ಕಾಲ ಮಾರ್ಗ ಬಂದ್ ಆಗಲಿದ್ದು, ರೈಲು ನಂ.20646 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ವಂದೇಭಾರತ್ ಎಕ್ಸ್‌ಪ್ರೆಸ್ ಹಾಗೂ ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ರೈಲುಗಳ ಸಂಚಾರದಲ್ಲಿ 10 ನಿಮಿಷ ವಿಳಂಬವಾಗಲಿದೆ.
ಡಿ.14ರ ಶನಿವಾರ ಬೆಳಗ್ಗೆ 7:30ರಿಂದ 9:50ರವರೆಗೆ 2ಗಂಟೆ 20 ನಿಮಿಷ ಕಾಲ ರೈಲು ಮಾರ್ಗ ಬಂದ್ ಆಗಲಿದ್ದು, ರೈಲು ನಂ.20646 ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ವಂದೇಭಾರತ್ ಎಕ್ಸ್‌ಪ್ರೆಸ್ ಹಾಗೂ ರೈಲು ನಂ.10107 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ಮೆಮು ರೈಲುಗಳ ಸಂಚಾರದಲ್ಲಿ 20 ನಿಮಿಷ ವಿಳಂಬವಾಗಲಿದೆ. ಪ್ರಯಾಣಿಕರು ಕೊಂಕಣ ರೈಲ್ವೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.