ಅಪಘಾತದ ವಿಚಾರದಲ್ಲಿ ಗಲಾಟೆ: ವಾಹನ ಸಹಿತ ಮೂವರು ವಶಕ್ಕೆ
Update: 2024-12-11 15:58 GMT
ಕೋಟ: ಅಪಘಾತದ ವಿಚಾರಕ್ಕಾಗಿ ಗಲಾಟೆ ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗವನ್ನುಂಟು ಮಾಡಿರುವ ಆರೋಪದಲ್ಲಿ ಕೋಟ ಪೊಲೀಸರು ಎರಡು ಕಾರು ಹಾಗೂ ಒಂದು ಸ್ಕೂಟರ್ ಸಹಿತ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಿಳಿಯಾರು ಗ್ರಾಮದ ಕೋಟ ಜಾಮೀಯ ಮಸೀದಿ ಎದುರು ರಾ.ಹೆ. 66ರಲ್ಲಿ ಡಿ.10ರಂದು ಸಂಜೆ ವೇಳೆ ಕೆಲವರು ವಾಹನಗಳು ತಾಗಿದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ವನ್ನುಂಟು ಮಾಡುತಿದ್ದರೆನ್ನಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಹಮ್ಮದ್ ಇರ್ಷಾದ್(25), ವಿನಾಯಕ(30) ಮತ್ತು ದಿನೇಶ(38) ಎಂಬವರನ್ನು ಮತ್ತು ಎರಡು ಕಾರು ಹಾಗೂ ಒಂದು ಸ್ಕೂಟರ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.