ಮೀನಿನ ವಾಹನದ ನಿರ್ವಾಹಕರಿಂದ ಹಣ ಕಳವು ಆರೋಪ: ಪ್ರಕರಣ ದಾಖಲು

Update: 2024-12-11 16:00 GMT

ಕಾಪು, ಡಿ.11: ಚಾಲಕ ಮಲಗಿದ್ದ ವೇಳೆ ಮೀನಿನ ವಾಹನದ ನಿವಾರ್ಹಕರಿಬ್ಬರು ಲಕ್ಷಾಂತರ ರೂ. ಹಣ ಕಳವು ಮಾಡಿ ಕೊಂಡು ಪರಾರಿಯಾಗಿರುವ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಕುಂದಾಪುರದ ಎಂಕೋಡಿಯ ಆಸ್ಮಾ ಎಂಬವರು ತನ್ನ ಮೀನಿನ ವಾಹನಕ್ಕೆ ಚಾಲಕರಾಗಿ ಅಬ್ದುಲ್ ಸತ್ತರ್ ಮತ್ತು ನಿರ್ವಾಹ ಕರಾಗಿ ಮುಹಮ್ಮದ್ ಅದ್ನಾನ್ ಹಾಗೂ ಆತನ ಸ್ನೇಹಿತ ನಿಶಾದ್‌ರನ್ನು ನಿಯೋಜಿಸಿದ್ದರು. ನ.10ರಂದು ಬೆಳಗಿನ ಜಾವ 4ಗಂಟೆಗೆ ಮೀನಿನ ವಾಹನವನ್ನು ಕಟಪಾಡಿಯಲ್ಲಿ ನಿಲ್ಲಿಸಿ ಚಾಲಕ ಅಬ್ದುಲ್ ಸತ್ತಾರ್ ಮಲಗಿದ್ದರು.

ಬೆಳಗ್ಗೆ 6ಗಂಟೆಗೆ ಎಚ್ಚರ ವಾದಾಗ ವಾಹದಲ್ಲಿ ಅದ್ನಾನ್ ಮತ್ತು ನಿಶಾದ್ ನಾಪತ್ತೆಯಾಗಿದ್ದರು. ಬಳಿಕ ಪರಿಶೀಲಿಸಿದಾಗ ವಾಹನದಲ್ಲಿ ಇಟ್ಟಿದ್ದ 4.25 ಲಕ್ಷ ರೂ. ನಗದು ಹಣವನ್ನು ಕಳವಾಗಿರುವುದು ಕಂಡುಬಂದಿದೆ. ಇವರಿಬ್ಬರು ಆ ಹಣವನ್ನು ಕದ್ದುಕೊಂಡು ಹೋಗಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News