ರಾಷ್ಟ್ರದ ಹಿತಾಸಕ್ತಿ ಕಾಪಾಡುವುದೇ ವಿದೇಶಾಂಗ ನೀತಿಯ ಪ್ರಥಮ ಪ್ರಾಶಸ್ತ್ಯ: ಪ್ರೊ.ಸುರೇಂದ್ರನಾಥ ಶೆಟ್ಟಿ
ಉಡುಪಿ: ರಾಷ್ಟ್ರ ರಾಷ್ಟ್ರಗಳ ನಡುವಿನ ರಾಜಕೀಯ ಆರ್ಥಿಕ ಸಾಂಸ್ಕೃತಿಕ ಮಿಲಿಟರಿ ಮುಂತಾದ ಕ್ಷೇತ್ರಗಳಲ್ಲಿನ ಸಂಬಂಧ ಗಳನ್ನು ನಿರ್ಧರಿಸುವ ತಂತ್ರಗಾರಿಕೆಯೇ ವಿದೇಶಾಂಗ ನೀತಿ. ವಿದೇಶಾಂಗ ನೀತಿ ರೂಪಿಸುವುದು ಒಂದು ಕಲೆ ಮತ್ತು ತಂತ್ರಗಾರಿಕೆ. ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವುದು ಪ್ರತಿಯೊಂದು ರಾಷ್ಟದ ಮೊದಲ ಆದ್ಯತೆ ಎಂದು ಉಡುಪಿ ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದ್ದಾರೆ.
ಉಡುಪಿ ಮತ್ತು ಉದ್ಯಾವರ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ ಕಡಿಯಾಳಿಯ ರೋಟರಿ ಭವನದಲ್ಲಿ ಆಯೋಜಿಸಲಾದ ಬದಲಾಗುತ್ತಿರುವ ವಿಶ್ವದ ವಿದ್ಯಾಮಾನಗಳು ಭಾರತದ ಮೇಲಾಗುವ ಪರಿಣಾಮಗಳು ಕುರಿತಾಗಿ ಅವರು ವಿಶೇಷ ಉಪನ್ಯಾಸ ನೀಡಿದರು.
ಉಡುಪಿ ರೋಟರಿ ಅಧ್ಯಕ್ಷ ಗುರುರಾಜ್ ಭಟ್, ಉದ್ಯಾವರ ರೋಟರಿ ಅಧ್ಯಕ್ಷ ಜೀವನ್ ಡಿಸೋಜ ಉಪಸ್ಥಿತರಿದ್ದರು. ಉಡುಪಿ ರೋಟರಿ ಕಾರ್ಯ ದರ್ಶಿ ವೈಷ್ಣವಿ ಆಚಾರ್ಯ ವಂದಿಸಿದರು. ನಂತರದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು.