ಉಚ್ಚಿಲ: ಆರೋಗ್ಯ ಮಾಹಿತಿ ಶಿಬಿರ

Update: 2025-03-13 18:22 IST
ಉಚ್ಚಿಲ: ಆರೋಗ್ಯ ಮಾಹಿತಿ ಶಿಬಿರ
  • whatsapp icon

ಉಡುಪಿ, ಮಾ.13: ಪೀಸ್ ಫೌಂಡೇಶನ್ ಮತ್ತು ಕೃಷ್ಣ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಆರೋಗ್ಯ ಮಾಹಿತಿ ಶಿಬಿರ ಇತ್ತೀಚೆಗೆ ಉಚ್ಚಿಲ ಸರಸ್ವತಿ ಮಂದಿರ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.

ಪೀಸ್ ಫೌಂಡೇಶನ್ ಸ್ಥಾಪಕಿ ಡಾ.ಸೋನಿಯಾ, ಕೃಷ್ಣ ಫ್ಯಾಮಿಲಿ ಟ್ರಸ್ಟ್‌ನ ಡಾ.ಕೆ.ಜಯರಾಮ ಭಟ್, ಸಾರಾ ಚಾರಿಟೇಬಲ್ ಟ್ರಸ್ಟ್‌ನ ಪ್ರೀದಾ ಸುರೇಶ್, ಪ್ರಾಥಮಿಕ ಶಾಲಾ ಸಂಚಾಲಕ ಮೋಹನದಾಸ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಲಾವತಿ, ಪೀಸ್ ಫೌಂಡೇಶನ್ ಕಾರ್ಯದರ್ಶಿ ಜಗದೀಶ್ ಭಟ್, ಸದಸ್ಯ ದಯಾನಂದ ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಬಾಬುರಾಯ ಆಚಾರ್ಯ ಸ್ವಾಗತಿಸಿದರು. ಡಾ.ಕೆ.ಜಯರಾಮ ಭಟ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಶಾಲಾ ವತಿಯಿಂದ ಡಾ.ಸೋನಿಯಾ ಅವರನ್ನು ಸನ್ಮಾನಿಸಲಾ ಯಿತು. ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಗೀತಾ ವೈ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News