×
Ad

ಮರವಂತೆಯ ಸವಿತಾಗೆ ಪಿಎಚ್‌ಡಿ ಪದವಿ

Update: 2025-03-16 18:03 IST

ಕುಂದಾಪುರ: ಪೆರಿಯಾರ್ ವಿಶ್ವವಿದ್ಯಾಲಯವು ಡಾ.ಸವಿತಾ ಕೆ. ಅವರಿಗೆ ದ ರೋಲ್ ಆಫ್ ಜಾಬ್ ಸಾಟಿಸ್ಫ್ಯಾಕ್ಷನ್ ಇನ್ ಲಿಂಕಿಂಗ್ ಪ್ರೊಫೆಷನಲ್ ಐಡೆಂಟಿಟಿ ಅಂಡ್ ಬರ್ನ್ ಔಟ್: ಡೆವಲಪ್ಮೆಂಟ್ ಅಂಡ್ ವಾಲಿಡೇಷನ್ ಆಫ್ ಅ ಪ್ರೊಫೆಷನಲ್ ಐಡೆಂಟಿಟಿ ಸ್ಕೇಲ್ ಫಾರ್ ಹೈಯರ್ ಸೆಕೆಂಡರಿ ಟೀಚರ್ಸ್ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಪಿಎಚ್.ಡಿ ಪದವಿ ನೀಡಿದೆ.

ಅವರು ಪೆರಿಯಾರ್ ವಿಶ್ವವಿದ್ಯಾಲಯದ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಜೆ.ವೆಂಕಟಾಚಲಂ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದಾರೆ. ಸರಸ್ವತಿ ಮತ್ತು ಚಂದ್ರಕಾಂತ. ಕೆ ದಂಪತಿಯ ಪುತ್ರಿಯಾಗಿರುವ ಇವರು, ಅಂಕೋಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕಿಶನ್ ಅವರ ಪತ್ನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News