ಪ್ರತಿಯೊಬ್ಬರು ಜಾಗೃತಗೊಂಡಾಗ ಪರಿಸರನ್ನು ಉಳಿಸಲು ಸಾಧ್ಯ: ಪ್ರಮೋದ್ ಹಂದೆ

Update: 2025-03-16 21:16 IST
ಪ್ರತಿಯೊಬ್ಬರು ಜಾಗೃತಗೊಂಡಾಗ ಪರಿಸರನ್ನು ಉಳಿಸಲು ಸಾಧ್ಯ: ಪ್ರಮೋದ್ ಹಂದೆ
  • whatsapp icon

ಕೋಟ: ಸ್ವಚ್ಛತೆ ಎಂಬುವುದು ಪ್ರತಿಯೊಬ್ಬರಲ್ಲೂ ಜಾಗೃತ ಗೊಂಡಾಗ ಪರಿಸರನ್ನು ಉಳಿಸಿ ಬೆಳೆಸಲು ಸಾಧ್ಯವಿದೆ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎಚ್ ಪ್ರಮೋದ್ ಹಂದೆ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಇದರ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಕೋಟತಟ್ಟು ಗ್ರಾಪಂ, ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಟ, ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ ಇವುಗಳ ಸಹಯೋಗದೊಂದಿಗೆ 246ನೇ ಪರಿಸರಸ್ನೇಹಿ ಅಭಿಯಾನ ಕೋಟತಟ್ಟು ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಇಡೀ ಮನುಕುಲಕ್ಕೆ ಸಂಕಷ್ಟವನ್ನು ತಂದೊಡುತ್ತಿದೆ. ಅದರ ಬಳಕೆ ಕೂಡಾ ಅತಿಯಾಗಿ ವಿಜೃಂಭಿಸುತ್ತಿದೆ. ಇದರಿಂದ ಭೂಮಿಗೆ ಸಮಿತಗೊಳ್ಳದೆ ಸಮುದ್ರ ಸೇರಿದಂತೆ ವಿವಿಧ ಬಾಗಗಳಿಗೆ ಕಂಠಕವಾಗಿ ಪರಿಣಮಿಸಿದೆ. ಇದರ ಬಗ್ಗೆ ಜಾಗೃತಗೊಳ್ಳುವುದು ಅತ್ಯವಶ್ಯಕ ಎಂದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಪಂ ಸದಸ್ಯ ವಾಸು ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಸಂಚಾಲಕ ಅಮೃತ್ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಆಶ್ರೀತ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಹಿಳಾ ಮಂಡಲದ ಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News