ಕಂಪೌಂಡ್‌ಗೆ ಬೈಕ್ ಢಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
Update: 2025-03-17 21:04 IST
ಬೈಂದೂರು, ಮಾ.17: ಬೈಕೊಂದು ನಿಯಂತ್ರಣ ತಪ್ಪಿ ಕಂಪೌಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಾಡ ಗ್ರಾಮದ ಕಳುವಿನ ಬಾಗಿಲುಮನೆ ರವಿವಾರ ರಾತ್ರಿ 7.45ರ ಸುಮಾರಿಗೆ ವೇಳೆ ನಡೆದಿದೆ.
ಮೃತರನ್ನು ಮೊವಾಡಿ ನಿವಾಸಿ ಕೃಷ್ಣ ಮೊಗವೀರ ಎಂಬವರ ಮಗ ನಿತಿನ್ ಮೊಗವೀರ(26) ಎಂದು ಗುರುತಿಸಲಾಗಿದೆ.
ಇವರು ತನ್ನ ತಂಗಿಯನ್ನು ಬೈಕಿನಲ್ಲಿ ಕುಂದಾಪುರದ ಬಸ್ ನಿಲ್ದಾಣದಲ್ಲಿ ಬಿಟ್ಟು ಮೊವಾಡಿ ಕಡೆಯಿಂದ ನಾಡ ಕಡೆಗೆ ಬರುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ, ರತ್ನಾಕರ ಎಂಬವರ ರಸ್ತೆ ಬದಿಯ ಕಂಪೌಂಡ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.