ಮಹಿಳಾ ದಿನಾಚರಣೆ: ಸಾಧಕ ಮಹಿಳೆಯರಿಗೆ ಸನ್ಮಾನ

ಉಡುಪಿ: ಉಡುಪಿ ಜಯಂಟ್ಸ್ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯ ವತಿಯಿಂದ ಜಿಲ್ಲೆಯ ವಿವಿಧ ರಂಗಗಳ ಸಾಧಕ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸ ಲಾಯಿತು.
ಕಾರ್ಯಕ್ರಮವನ್ನು ಜಯಂಟ್ಸ್ ಉಡುಪಿಯ ಅಧ್ಯಕ್ಷ ವಿನಯ್ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನೃತ್ಯ ಸಂಯೋಜಕಿ ವಿದುಷಿ ಲಕ್ಷ್ಮೀ ಗುರುರಾಜ್ ಕೊಡವೂರು, ಕೃಷಿ ಮಹಿಳೆ ಉಷಾ ಪೂಜಾರಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಗೀತಾ ಪುತ್ರನ್ ಅವರನ್ನು ಸನ್ಮಾನಿಸಲಾಯಿತು.
ಜಯಂಟ್ಸ್ ವೆಲ್ಫೇರ್ ಫೌಂಡೇಶನ್‌ನ ಕೇಂದ್ರೀಯ ಸಮಿತಿ ಸದಸ್ಯ ದಿನಕರ ಕೆ.ಅಮೀನ್, ಜಯಂಟ್ಸ್ ಫೆಡರೇಶನ್ ೬ರ ಅಧ್ಯಕ್ಷ ಪಿ.ತೇಜೇಶ್ವರ್ ರಾವ್, ಫೆಡರೇಶನ್ 6ರ ಪಿಆರ್‌ಒ ಲಕ್ಷ್ಮೀಕಾಂತ್ ಬೆಸ್ಕೂರ್ ಮತ್ತು ಸದಸ್ಯರಾದ ವಿವೇಕಾನಂದ ಕಾಮತ್ ಅತಿಥಿಗಳಾಗಿದ್ದರು.
ಡಯಾನ ಸುಪ್ರಿಯಾ ಕಾರ್ಯಕ್ರಮ ಸಂಯೋಜಿಸಿದ್ದರು. ಕಾರ್ಯದರ್ಶಿ ದಿವಾಕರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಾದಿರಾಜ ಸಾಲ್ಯಾನ್ ವಂದಿಸಿದರು.