ಕುಂದಾಪುರ ನಗರದಲ್ಲಿ ಪಾರ್ಕಿಂಗ್‌ಗೆ ಸ್ಥಳ ಗುರುತು: ಪುರಸಭೆ ಸಾಮಾನ್ಯ ಸಭೆಯಲ್ಲಿ ಟ್ರಾಫಿಕ್ ಎಸ್ಸೈ ಪ್ರಸಾದ್ ಮಾಹಿತಿ

Update: 2025-04-09 22:25 IST
ಕುಂದಾಪುರ ನಗರದಲ್ಲಿ ಪಾರ್ಕಿಂಗ್‌ಗೆ ಸ್ಥಳ ಗುರುತು: ಪುರಸಭೆ ಸಾಮಾನ್ಯ ಸಭೆಯಲ್ಲಿ ಟ್ರಾಫಿಕ್ ಎಸ್ಸೈ ಪ್ರಸಾದ್ ಮಾಹಿತಿ
  • whatsapp icon

ಕುಂದಾಪುರ, ಎ.9: ಕುಂದಾಪುರ ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ಗಾಗಿ ಕೆಲವು ಸ್ಥಳಗಳನ್ನು ಗುರುತಿಸಲಾ ಗಿದ್ದು, ಪುರಸಭೆ ಅನುಮತಿ ನೀಡಿದರೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಕುಂದಾಪುರ ಸಂಚಾರ ಠಾಣೆಯ ಎಸ್ಸೈ ಪ್ರಸಾದ್ ಕುಮಾರ್ ತಿಳಿಸಿದ್ದಾರೆ.

ಕುಂದಾಪುರ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ಪುರಸಭಾಧ್ಯಕ್ಷ ಕೆ. ಮೋಹದಾಸ್ ಶೆಣೈ ಅಧ್ಯಕ್ಷತೆಯಲ್ಲಿ ಜರಗಿದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತಿದ್ದರು.

ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಗಿರೀಶ್ ಜಿ.ಕೆ., ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ದಟ್ಟಣೆ ಹೆಚ್ಚುತ್ತಿದೆ. ನಗರದ ಹೃದಯ ಭಾಗವಾದ ಶಾಸ್ತ್ರಿ ಸರ್ಕಲ್‌ನಲ್ಲಿ ರಸ್ತೆ ಅವಘಡಗಳು ಹೆಚ್ಚುತ್ತಿವೆ. ಇಲ್ಲಿನ ಕಾಲೇಜು ರಸ್ತೆಯಲ್ಲಿ ಯುವಕರು ಬೈಕ್ ವೀಲಿಂಗ್ ಮಾಡುತ್ತಿದ್ದು ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಎಸ್ಸೈ ಪ್ರಸಾದ್ ಕುಮಾರ್, ಶಾಸ್ತ್ರಿ ವೃತ್ತದಲ್ಲಿ ಸಂಚಾರಿ ಸಮಸ್ಯೆಗಳ ಬಗೆಹರಿಸಲು ನಿತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಸಿಸಿ ಟಿವಿ ಅಳವಡಿಸಲಾಗಿದೆ. ಖಾಸಗಿ ಬಸ್ಸಿನವರ ಸಭೆ ಕರೆದು ಬಸ್ಸುಗಳನ್ನು ನಿಗದಿತ ಅವಧಿಗಿಂತ ಹೆಚ್ಚು ಸಮಯ ನಿಲ್ಲಿಸದಂತೆ ಸೂಚಿಸಲಾಗಿದೆ ಎಂದರು.

ಇಲ್ಲಿನ ಕಾಲೇಜು ರಸ್ತೆಯಲ್ಲಿ ಬೈಕ್ ವೀಲಿಂಗ್ ನಡೆಯುತ್ತಿರುವ ಬಗ್ಗೆ ಸೂಕ್ತ ಕ್ರಮವಹಿಸಲಾಗುವುದು. ಕಳೆದೊಂದು ತಿಂಗಳಿನಲ್ಲಿ 25ಕ್ಕೂ ಅಧಿಕ ಕರ್ಕಶ ಶಬ್ದ ಮಾಡುವ ಹಾರ್ನ್‌ಗಳನ್ನು ತೆಗೆಸಿ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.

ಕ್ಷಮೆಯಾಚಿಸಿದ ಸದಸ್ಯ: ಕೋಡಿ ರೆಸಾರ್ಟ್ ನಿರ್ಮಾಣ ಪರವಾನಿಗೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯ ಅಶ್ಫಕ್ ಕೋಡಿ ಮಾಡಿರುವ ಭ್ರಷ್ಟಾಚಾರದ ಆರೋಪ ಬಗ್ಗೆ ಕಳೆದ ಸಭೆಯಲ್ಲಿ ಭಾರೀ ಚರ್ಚೆಯಾ ಗಿದ್ದು ಈ ವಿಚಾರ ಏನಾಗಿದೆ ಎಂದು ಆಡಳಿತ ಪಕ್ಷದ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಶ್ಫಕ್, ಊರಿನ ಪ್ರಮುಖರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ ಎಂದರು. ಆಗ ಆಡಳಿತ ಪಕ್ಷದ ಸದಸ್ಯರಾದ ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ ಅಸಮಾಧಾನ ವ್ಯಕ್ತಪ ಡಿಸಿ ಕಳೆದ ಸಭೆಯಲ್ಲಿ ಭ್ರಷ್ಟಾಚಾರದ ಆರೋಪ ಮಾಡಿ ಬಳಿಕ ನೀವೇ ಹೊರಗಡೆ ಸರಿಪಡಿಸಿ ಕೊಳ್ಳುವುದಾದರೆ ಸಭೆಯಲ್ಲಿ ಪ್ರಸ್ತಾಪಿಸಿರುವುದು ಯಾಕೆ ಎಂದು ಪ್ರಶ್ನಿಸಿದರು.

ನನ್ನ ವಾರ್ಡ್ ಸಮಸ್ಯೆ ಬಗ್ಗೆ ನನ್ನ ಗಮನಕ್ಕೂ ತಂದಿಲ್ಲ ಎಂದು ಕಮಲಾ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ವಿಪಕ್ಷ ಸದಸ್ಯ ಶ್ರೀಧರ್ ಸೇರಿಗಾರ್ ಧ್ವನಿಗೂಡಿಸಿದರು. ಆಧಾರವಿಲ್ಲದೆ ಭ್ರಷ್ಟಾ ಚಾರದ ಆರೋಪವನ್ನು ಮಾಡಿದ ವಿಪಕ್ಷ ಸದಸ್ಯ ಹೇಳಿಕೆ ವಾಪಾಸ್ ಪಡೆಯಬೇಕೆಂಬ ಆಗ್ರಹ ಆಡಳಿತ ಪಕ್ಷದವರಿಂದ ಕೇಳಿಬಂತು. ಈ ವೇಳೆ ಅಶ್ಫಕ್ ಕ್ಷಮೆಯಾಚಿಸಿದರು.

ವಾಟ್ಸಾಪ್ ಸ್ಟೇಟಸ್ ಚರ್ಚೆ: ಕಳೆದ ವಿಶೇಷ ಸಭೆಯಲ್ಲಿ ವಿಪಕ್ಷದ ಸದಸ್ಯೆ ಪ್ರಭಾವತಿ ಶೆಟ್ಟಿ, ಪುರಸಭಾಧ್ಯ ಕ್ಷರ ಕುರಿತಾಗಿ ಬಂದಿದ್ದ ಸಂದೇಶವನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯ ರಾಘವೇಂದ್ರ ಖಾರ್ವಿ ಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ವಿಚಾರ ಸಾಕಷ್ಟು ಗೊಂದಲಗಳಿಗೆ ಕಾರಣವಾಯಿತು.

ಸದಸ್ಯೆ ಪ್ರಭಾವತಿ ಶೆಟ್ಟಿ, ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಅದೊಂದು ಫಾರ್ವರ್ಡ್ ಸಂದೇಶವಾಗಿದ್ದು ಮೂಲ ಕಳುಹಿಸಿದವರ ಬಗ್ಗೆ ಆರೋಪಗಳ ದಾಖಲೆ ಕೇಳುವುದು ಬಿಟ್ಟು ನನ್ನ ಮೇಲೆ ರೇಗಾಡುವುದು ಸರಿಯಲ್ಲ ಎಂದರು. ಸದಸ್ಯ ರಾಘವೇಂದ್ರ ಖಾರ್ವಿ ಮಾತನಾಡಿ, ಪುರಸಭೆ ಅಧ್ಯಕ್ಷರ ಮೇಲಿರುವ ಆರೋಪದ ಬಗ್ಗೆ ನಿರಾಧಾರವಾಗಿ ಸ್ಟೇಟಸ್ ಹಾಕಿರುವುದು ಸರಿಯಲ್ಲ ಎಂದರು. ಈ ವಿಚಾರವಾಗಿ ವಾಗ್ವಾದಗಳು ನಡೆದವು.

ಸಭೆಯಲ್ಲಿ ಕುಂದಾಪುರ ಪುರಸಭೆ ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್ ವಿ., ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News