ಕೇಂದ್ರ ಸರಕಾರದ ಜನ ವಿರೋಧಿ ಆಡಳಿತದ ವಿರುದ್ಧ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2025-04-10 18:36 IST
ಕೇಂದ್ರ ಸರಕಾರದ ಜನ ವಿರೋಧಿ ಆಡಳಿತದ ವಿರುದ್ಧ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ
  • whatsapp icon

ಕುಂದಾಪುರ, ಎ.10: ಕೇಂದ್ರ ಸರಕಾರದ ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ವಿರುದ್ಧ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ಕಳೆದ 10 ವರ್ಷ ಗಳಿಂದ ಕಚ್ಚಾ ತೈಲಗಳ ಬೆಲೆ ಇಳಿಕೆಯಾದರೂ, ಪೆಟ್ರೋಲ್ ಮತ್ತು ಡೀಸೆಲ್ ದರ ನಿಯಂತ್ರಿಸದ ಕೇಂದ್ರ ಸರಕಾರ ಮತ್ತೊಮ್ಮೆ ಗ್ಯಾಸ್ ದರವನ್ನು 50ರೂ.ಗೆ ಏರಿಸಿ ದೇಶದ ಭವಿಷ್ಯವನ್ನು ಆತಂಕಕ್ಕೆ ತಂದಿರಿಸಿದೆ. ರಾಜ್ಯ ಬಿಜೆಪಿ ಆಯೋಜಿಸಲಿರುವ ಜನಾಕ್ರೋಶ ಯಾತ್ರೆಯಲ್ಲಿ ಅವರು ಜನರ ಕ್ಷಮೆಯನ್ನು ಯಾಚಿಸ ಬೇಕು ಎಂದು ಆಗ್ರಹಿಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ಮಾತನಾಡಿದರು.

ಈ ಸಂದರ್ಭ ಜಿಲ್ಲಾ ಇಂಟೆಕ್ ಅಧ್ಯಕ್ಷ ಕಿರಣ್ ಹೆಗ್ಡೆ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಭಿಜಿತ್ ಪೂಜಾರಿ ಹೇರಿಕುದ್ರು, ಕುಂದಾಪುರ ಬ್ಲಾಕ್ ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್, ಅಸಂಘಟಿತ ಕಾರ್ಮಿಕ ವಲಯದ ಜಿಲ್ಲಾಧ್ಯಕ್ಷ ವಿಶ್ವಾಸ್ ಶೆಟ್ಟಿ, ಕುಂದಾಪುರ ಬ್ಲಾಕ್ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುನಾಫ್ ಕೋಡಿ, ಎನ್‌ಎಸ್‌ಯುಐ ಅಧ್ಯಕ್ಷ ಸುಜನ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಜಾನಕಿ ಬಿಲ್ಲವ, ಆನಗಳ್ಳಿ ಗ್ರಾ.ಪಂ ಅಧ್ಯಕ್ಷೆ ಸವಿತಾ, ಕೋಣಿ ಗ್ರಾ.ಪಂ ಅಧ್ಯಕ್ಷ ಗಣಪತಿ ಶೇಟ್, ಮುಖಂಡರಾದ ನಾರಾಯಣ ಆಚಾರ್ಯ ಕೋಣಿ, ಆಶಾ ಕರ್ವೆಲ್ಲೋ, ಅರುಣ್ ಪಟೇಲ್, ವೇಲಾ ಬ್ರಗಾಂಜಾ, ಸಲಾಂ ತೆಕ್ಕಟ್ಟೆ, ಜಯಕರ ಕಾಳಾವರ, ಜೊಸೆಫ್ ಆನಗಳ್ಳಿ, ಸತೀಶ್ ನಾಯ್ಕ್ ಆನಗಳ್ಳಿ, ಜಾಕ್ಸನ್ ಡಿಸೋಜಾ ಆನಗಳ್ಳಿ, ಗೀತಾ ಎಸ್., ರೋಶನ್ ಬರೆಟ್ಟೋ ಉಪಸ್ಥಿತರಿದ್ದರು. ಜೊಯ್ಸ್ಟನ್ ಡಿಸೋಜ ಆನಗಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News