ಹಾವಂಜೆ: ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರಕ್ಕೆ ಚಾಲನೆ

ಉಡುಪಿ, ಎ.10: ಭಾವನಾ ಫೌಂಡೇಶನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿ ಯಿಂದ ಹಾವಂಜೆ ಶ್ರೀಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊ ಳ್ಳಲಾಗಿರುವ ಬಾಲ ಲೀಲಾ ಚಿಣ್ಣರ ಬೇಸಿಗೆ ಶಿಬಿರವನ್ನು ಸಂಗೀತ ಸಂಯೋಜಕ ಅರುಣ್ ಹಾವಂಜೆ ಗುರುವಾರ ಉದ್ಘಾಟಿಸಿದರು.
ಭಾವನಾ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಯಕ್ಷಗುರು ಹಾವಂಜೆ ಮಂಜು ನಾಥ ರಾವ್ ಹಾಗೂ ಶಿಬಿರ ಸಂಯೋಜಕ ಡಾ.ಜನಾರ್ದನ ಹಾವಂಜೆ, ವಿಶುರಾವ್ ಹಾವಂಜೆ, ವಿದುಷಿ ಅಕ್ಷತಾ ವಿಶು ರಾವ್ ಉಪಸ್ಥಿತ ರಿದ್ದರು. ಶಿಬಿರದಲ್ಲಿ ಅಭಿನಯ, ಆವೆಮಣ್ಣಿನ ಶಿಲ್ಪಗಳು, ಕಾವಿ ಕಲೆ, ಪಕ್ಷಿ ವೀಕ್ಷಣೆ, ಮನೆಮದ್ದು, ಗ್ರಾಮೀಣ ಆಟಗಳು, ಸಂಗೀತ, ಬಟ್ಟೆಯ ಮೇಲೆ ಮುದ್ರಣ ಕಲೆ ಮುಂತಾಗಿ ಹತ್ತು ಹಲವಾರು ಅಂಶಗಳನ್ನು ಕಲಿಸಿ ಕೊಡಲಾಗುತ್ತದೆ.
ಎ.13ರಂದು ನಡೆಯಲಿರುವ ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ ವಿಶ್ವ ಕಲಾ ಸಿಂಧು ಪುರಸ್ಕಾರವನ್ನು ಹಿರಿಯ ಕಲಾವಿದ ರಮೇಶ್ ರಾವ್ ಅವರಿಗೆ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಥಾನದ ಸ್ಥಾಪಕ ವಿಶ್ವನಾಥ ಶೆಣೈ, ಕುಂದಾಪುರದ ಯುವ ಉದ್ಯಮಿ ಸಂಪತ್ ಶೆಟ್ಟಿ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.