ಉಡುಪಿ: ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನರ್ಸ್‌ಗೆ ವಂಚನೆ
Update: 2025-04-10 20:34 IST

ಉಡುಪಿ, ಎ.10: ಸರಕಾರಿ ಉದ್ಯೋಗ ಕೊಡಿಸುವುದಾಗಿ ನರ್ಸ್‌ಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿಯ ರೇವತಿ(31) ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸವನ್ನು ಮಾಡಿ ಕೊಂಡಿದ್ದು, ಈ ವೇಳೆ ಪಡುಬಿದ್ರಿಯ ಸಚಿನ್ ಎಂಬಾತನ ಪರಿಚಯವಾಗಿತ್ತು. ಆತ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮೇಲಾಧಿಕಾರಿಯವರಿಗೆ ಹಣ ಕೊಡಬೇಕಾಗಿದೆ ಎಂದು ಹೇಳಿ ರೇವತಿ ಅವರಿಂದ ಹಂತ-ಹಂತವಾಗಿ 2024ರ ಎ.11ರಿಂದ ಮೇ 20ರ ಮಧ್ಯಾವಧಿಯಲ್ಲಿ ಒಟ್ಟು 1,65,000ರೂ. ಹಣ ಪಡೆದಿದ್ದನು ಎಂದು ದೂರ ಲಾಗಿದೆ.
ದಾಖಲಾತಿಗಳಾದ ಪಾನ್‌ಕಾರ್ಡ್, ಆಧಾರ್ ಕಾರ್ಡ್, ಜಾತಿ ಆದಾಯ ಪ್ರಮಾಣಪತ್ರ, ಹತ್ತನೇ ತರಗತಿ, ದ್ವಿತಿಯ ಪಿಯುಸಿ ಅಂಕಪಟ್ಟಿ ಹಾಗೂ ನರ್ಸಿಂಗ್‌ನ ಮೂಲದಾಖಲಾತಿಗಳನ್ನು ಪಡೆದುಕೊಂಡು ಈವರೆಗೂ ಸರಕಾರಿ ಉದ್ಯೋಗವನ್ನು ಕೊಡಿಸದೇ, ಹಣ ಮತ್ತು ದಾಖಲಾತಿಗಳನ್ನು ವಾಪಸ್ಸು ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ದೂರಲಾಗಿದೆ.