ರೈಲಿನಲ್ಲಿ ಪ್ರಯಾಣಿಕನ ಚಿನ್ನಾಭರಣದ ಬ್ಯಾಗ್ ಕಳವು
Update: 2025-04-10 20:39 IST

ಮಣಿಪಾಲ, ಎ.10: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಚಿನ್ನಾಭರಣ ಗಳಿದ್ದ ಬ್ಯಾಗ್ ಕಳವಾಗಿರುವ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ ರಾವ್(73) ಎಂಬವರು ಎ.7ರಂದು ಸಂಜೆ ಮತ್ಸ್ಯಗಂಧ ರೈಲಿನಲ್ಲಿ ಮುಂಬೈಯಿಂದ ಪ್ರಯಾಣಿ ಸಿದ್ದು, ತಮ್ಮ ಸೂಟ್‌ಕೇಸ್ ಮತ್ತು ಹ್ಯಾಂಡ್ ಬ್ಯಾಗ್‌ಗಳನ್ನು ಸೀಟಿನ ಕೆಳೆಗಡೆ ಇಟ್ಟಿದ್ದರು. ಒಡೆವೆಗಳಿದ್ದ ವ್ಯಾನಿಟಿ ಬ್ಯಾಗ್‌ನ್ನು ಅವರ ತಲೆಯ ಬಳಿ ಇರಿಸಿ ರಾತ್ರಿ ಮಲಗಿದ್ದರು.
ಎ.8ರಂದು ಬೆಳಗ್ಗೆ 5:30ರ ಸುಮಾರಿಗೆ ರೈಲು ಇಂದ್ರಾಳಿ ರೈಲ್ವೇ ನಿಲ್ದಾಣ ತಲುಪಿದಾಗ ವಿಜಯ ರಾವ್‌ಗೆ ನಿದ್ದೆಯಿಂದ ಎಚ್ಚರವಾಗಿದ್ದು, ಅವರ ತಲೆಯ ಬಳಿ ಇಟ್ಟಿದ್ದ 138ಗ್ರಾಂ ತೂಕದ ಬಂಗಾರ ಹಾಗೂ ವಜ್ರದ ಆಭರಣಗಳು ಮತ್ತು 8000ರೂ. ನಗದು ಇರುವ ವ್ಯಾನಿಟ್ ಬ್ಯಾಗ್ ಕಳವು ಆಗಿರುವುದು ಕಂಡುಬಂದಿದೆ.