ಸಾಲಿಗ್ರಾಮ ಪ.ಪಂ: ಆಸ್ತಿ ತೆರಿಗೆ ಪಾವತಿಗೆ ಸೂಚನೆ

Update: 2025-04-17 22:07 IST
ಸಾಲಿಗ್ರಾಮ ಪ.ಪಂ: ಆಸ್ತಿ ತೆರಿಗೆ ಪಾವತಿಗೆ ಸೂಚನೆ
  • whatsapp icon

ಉಡುಪಿ, ಎ.17: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟ್ಟಡ ಹಾಗೂ ಖಾಲಿ ನಿವೇಶನದ ಮಾಲಕರು ಹಾಗೂ ಅಧಿಭೋಗದಾರರು 2025-26ನೇ ಸಾಲಿಗೆ ಅಸ್ತಿ ತೆರಿಗೆಯನ್ನು ಎ.1ರಿಂದ 30ರ ಒಳಗೆ ಪಾವತಿಸಿದ್ದಲ್ಲಿ ಶೇ.5 ರಿಯಾಯಿತಿ ಪಡೆಯಬಹುದು. ಮೇ 1ರಿಂದ ಜೂನ್ 30ರವರೆಗೆ ದಂಡ ರಹಿತ ಪಾವತಿಗೆ ಅವಕಾಶವಿದ್ದು, ಜುಲೈ-1ರ ನಂತರ ಪಾವತಿಸಿದಲ್ಲಿ ಆಸ್ತಿ ತೆರಿಗೆ ಮೇಲೆ ಪ್ರತಿ ತಿಂಗಳು ಶೇ.2ರಷ್ಟು ದಂಡ ವಿಧಿಸಲಾಗುವುದು.

2024-25ನೇ ಸಾಲಿನ ಹಾಗೂ ಹಿಂದಿನ ಅವಧಿಯ ಅಸ್ತಿ ತೆರಿಗೆ ಪಾವತಿಸದೇ ಇರುವವರು ಶೇ.2ರಷ್ಟು ದಂಡನೆಯೊಂದಿಗೆ ಪಾವತಿಸುವಂತೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News