ಗ್ಯಾಸ್ ಲೀಕೆಜ್: ಬೆಂಕಿ ಅಕಸ್ಮಿಕದಿಂದ ಯುವಕ ಮೃತ್ಯು
Update: 2025-04-19 21:41 IST
ಹೆಬ್ರಿ, ಎ.19: ಗ್ಯಾಸ್ ಲೀಕೆಜ್‌ನಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆರೆಬೆಟ್ಟು ಗ್ರಾಮದ ಮಂಡಾಡಿ ಜೆಡ್ಡು ಎಂಬಲ್ಲಿ ನಡೆದಿದೆ.
ಮೃತರನ್ನು ಹೆಬ್ರಿಯ ಅನೂಪ(35) ಎಂದು ಗುರುತಿಸಲಾಗಿದೆ. ಇವರು ಎ.11ರಂದು ಸಂಜೆ ಮನೆಯಲ್ಲಿ ಅಡುಗೆ ಮಾಡಲು ಹೋಗಿ ಸ್ಟೌ ಹಚ್ಚಿದಾಗ ಒತ್ತಡದಿಂದ ಅಥವಾ ಲೀಕೆಜ್‌ನಿಂದ ಒಮ್ಮಲೇ ಬೆಂಕಿ ಕಾಣಿಸಿ ಕೊಂಡಿತ್ತೆನ್ನ ಲಾಗಿದೆ. ಇದರಿಂದ ಅನೂಪ ಅವರ ಮೈಗೆ ಬೆಂಕಿ ತಗುಲಿ ಭಾಗಶಃ ದೇಹ ಸುಟ್ಟು ಹೋಗಿದೆ ಎನ್ನಲಾಗಿದೆ. ಈ ಬಗ್ಗೆ ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಎ.17ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.