ಇಂದ್ರಾಳಿ ಮಸೀದಿ ಆಡಳಿತಾಧಿಕಾರಿ ನೇಮಕ
Update: 2025-04-20 19:37 IST

ಉಡುಪಿ, ಎ.20: ಇಂದ್ರಾಳಿ ನೂರಾನಿ ಜುಮಾ ಮಸೀದಿಯ ಆಡಳಿತಾಧಿಕಾರಿಯಾಗಿ ನಿವೃತ್ತ ಕೆನರಾ ಬ್ಯಾಂಕ್ ಪ್ರಬಂಧಕ ಮುಹಮ್ಮದ್ ಹುಸೇನ್ ಅವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆದೇಶಿಸಿದೆ.
ಇವರು ಎ.1ರಂದು ಅಧಿಕಾರ ಸ್ವೀಕರಿಸಿದ್ದು, ಇಂದ್ರಾಳಿ ನೂರಾನಿ ಮಸೀದಿಗೆ ಒಳಪಟ್ಟ ಎಲ್ಲ ವ್ಯವಹಾರ ಗಳನ್ನು ಇವರ ಮೂಲಕ ಮಾಡಬೇಕು ಎಂದು ಪ್ರಕಟಣೆ ತಿಳಿಸಿದೆ.