ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ: ಯೋಜನೆಯಡಿ ಅಸಂಘಟಿತ ಕಾರ್ಮಿಕರ ನೋಂದಣಿಗೆ ಸೂಚನೆ

Update: 2025-04-21 21:28 IST
  • whatsapp icon

ಉಡುಪಿ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 26 ವರ್ಗಗಳ ಅಸಂಘ ಟಿತ ಕಾರ್ಮಿಕರು ಈಗಾಗಲೇ ಗುರುತಿಸಿ ನೋಂದಾಯಿಸಲು ಮತ್ತು ಅರ್ಹ ಕಾರ್ಮಿಕರಿಗೆ ವಿವಿಧ ಸೌಲಭ್ಯ ಗಳನ್ನು ನೀಡಲು ಸರಕಾರ ಆದೇಶಿಸಿದೆ.

ಈ ಯೋಜನೆಯಡಿ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ೩೮ ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ ೨೭ ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟು ೬೫ ಅಸಂಘಟಿತ ಕಾರ್ಮಿಕರನ್ನು ಹೊಸದಾಗಿ ಸೇರ್ಪಡೆ ಮಾಡಲಾಗುತ್ತಿದೆ.

ಒಟ್ಟಾರೆಯಾಗಿ 91 ವರ್ಗಗಳ ಅಸಂಘಟಿತ ಕಾರ್ಮಿಕರು ಮಂಡಳಿಯ ವೆಬ್‌ಸೈಟ್ - www.ksuwssb.karnataka.gov.in- ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಿ ಕೊಂಡು ಯೋಜನೆಯ ಸೌಲಭ್ಯಗಳನ್ನು ಪಡೆದು ಕೊಳ್ಳಬಹುದಾಗಿದೆ.

ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ನೋಂದಣಿ ಯಾಗಬಹುದಾದ ಪ್ರಾರಂಭಿಕವಾಗಿ ಗುರುತಿಸಲಾದ ೨೬ ವರ್ಗಗಳ ಅಸಂಘಟಿತ ಕಾರ್ಮಿಕರ ವಿವರ: ಹಮಾಲರು, ಟೈಲರ್‌ಗಳು, ಗೃಹ ಕಾರ್ಮಿಕರು, ಅಗಸರು, ಚಿಂದಿ ಆಯುವವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋ ಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು, ಅಲೆಮಾರಿ ಪಂಗಡದ ಕಾರ್ಮಿಕರು, ಹಗ್ಗ ಸಿದ್ಧಪಡಿಸುವ (ಬೈಜಂತ್ರಿ) ಕಾರ್ಮಿಕರು, ಉಪ್ಪನ್ನು ತಯಾರಿಸುವ ಉಪ್ಪಾರರು, ಬಿದಿರು ವೃತ್ತಿಯಲ್ಲಿರುವ ಮೇದಾರರು, ಚಪ್ಪಲಿ ತಯಾರಿಕೆ ರಿಪೇರಿ ಮಾಡುವ ಕಾರ್ಮಿಕರು, ಕೇಬಲ್ ಕಾರ್ಮಿಕರು, ಕಲ್ಯಾಣಮಂಟಪ/ ಸಭಾ ಭವನ/ ಟೆಂಟ್/ ಪೆಂಡಾಲ್‌ಗಳ ಕಾರ್ಮಿಕರು ಹಾಗೂ ಗಾದಿ, ಹಾಸಿಗೆ ಮತ್ತು ದಿಂಬು ತಯಾರಿಕಾ ಕಾರ್ಮಿಕರು (ಪಿಂಜಾರರು/ ನದಾಫರು).

ಹೊಸದಾಗಿ ಸೇರ್ಪಡೆ ಮಾಡಲಾಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ಅಸಂಘಟಿತ ವರ್ಗಗಳ ಕಾರ್ಮಿಕರು: ಬಡಗಿ/ ಮರದ ಕೆತ್ತನೆ ಕೆಲಸ, ಉಣ್ಣೆ ಮತ್ತು ಕಂಬಳಿ ನೇಯ್ಗೆ ಹಾಗೂ ಕಂಬಳಿ ತಯಾರಿಕೆ, ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ, ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ, ಪೊರಕೆ ಕಡ್ಡಿ ತಯಾರಿಕೆ, ಸುಣ್ಣ ಸುಡು ವುದು, ವಾಲಗ ಊದುವುದು, ದನಗಾಹಿ ವೃತ್ತಿ, ಹೈನುಗಾರಿಕೆ (ಗೌಳಿ ವೃತ್ತಿ), ಬಳೆ ವ್ಯಾಪಾರ/ ಮೇಣದ ಬತ್ತಿ ತಯಾರಿಕೆ, ಕಂಚು ಕೆಲಸ, ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ, ಬೆತ್ತದ ಕೆಲಸ (ರಟ್ಟನ್) ಆಟಿಕೆ / ಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ, ಚರ್ಮದ ವಸ್ತುಗಳ ತಯಾರಿಕೆ, ಅಗರಬತ್ತಿ ತಯಾರಿಕೆ, ಕಾಯರ್ ಫೈಬರ್ ತಯಾರಿಕೆ, ಸ್ಮಶಾನ ಕಾರ್ಮಿಕರು, ವಿಗ್ರಹ/ ಕಲ್ಲು ಕೆತ್ತನೆ ಕೆಲಸ, ಮೀನುಗಾರಿಕೆ, ನಾಟಿ ಔಷಧಿ ತಯಾರಿಕೆ, ಬಣ್ಣ ಶೃಂಗಾರ (ಬ್ಯೂಟಿ ಪಾರ್ಲರ್) ವೃತ್ತಿ, ಶೀಟ್ ಮೆಟಲ್ ವೃತ್ತಿ, ಬೈಸಿಕಲ್ ರಿಪೇರಿ, ಬಣ್ಣಗಾರಿಕೆ, ಮುದ್ರಣಗಾರಿಕೆ ಮತ್ತು ಹಚ್ಚೆ ಹಾಕುವುದು, ಮ್ಯಾಟ್ ತಯಾರಿಕೆ, ಗಾಡಿ/ ರಥ ತಯಾರಿಕೆ, ಗ್ಲಾಸ್ ಬೀಡ್ಸ್ ತಯಾರಿಕೆ, ಮೆಟಲ್ ಕ್ರಾಪ್ಟ್, ಟಿನ್ ವಸ್ತುಗಳ ತಯಾರಿಕೆ, ಜೇನು ಸಾಕಾಣಿಕೆ, ನಿಟ್ಟಿಂಗ್ ಕೆಲಸ, ಗಾಣದ ಕೆಲಸ, ಮೆಷನರಿ ಕೆಲಸ, ಹೂವು ಕಟ್ಟುವ ವೃತ್ತಿ, ಹೊಸೈರಿ ವಸ್ತುಗಳ ತಯಾರಿಕೆ, ಪಾತ್ರೆಗಳಿಗೆ ಕಲಾಯಿ ಹಾಕುವುದು, ವಾದ್ಯ ವೃಂದ ವೃತ್ತಿ, ವೈಲ್ಡಿಂಗ್ ಕೆಲಸ, ಕುರಿ ಸಾಕಾಣಿಕೆ ಹಾಗೂ ಧಾರ್ಮಿಕ ಭಿಕ್ಷುಕ ವೃತ್ತಿ.

ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ ಕಾರ್ಮಿಕರು: ಭವಿಷ್ಯ ನುಡಿಯುವುದು, ಲಾವಣಿ ಪದಗಳನ್ನು ಹಾಡುವುದು, ವಾಮಾನ ಪ್ರವಾದಿಗಳು, ಹಳ್ಳಿಗಾಡಿನ ಸಾಹಸ ಕಲೆಗಳ ಪ್ರದರ್ಶನ, ಗುಂಡು ಎಸೆಯುವುದು, ಲಾಗ ಹಾಕುವುದು, ಎತ್ತಿನ ಬಂಡಿ ತಿರುಗಿಸುವುದು ಮತ್ತು ಇತರೆ ಕಸರತ್ತುಗಳ ವೃತ್ತಿ, ದೇವಸ್ಥಾನಗಳಲ್ಲಿ ನರ್ತಿಸುವುದು, ಭಿಕ್ಷಾಟನೆ, ಅಂಬಾದೇವಿಯ ಆರಾಧಕರು, ಗೊಂದಳ್ಳಿ ವೃತ್ತಿ ಮಾಡುವುದು, ಜ್ಯೋತಿಷ್ಯ ಗಿಣಿ ಶಾಸ್ತ್ರ, ಹಸ್ತ ಮುದ್ರಿಕೆ ಶಾಸ್ತ್ರ, ಬುಡಬಡಕಿ ಭವಿಷ್ಯ, ಕಣಿ ಹೇಳುವುದು, ದೇವರ ಕಥೆಗಳು ಹಾಗೂ ಪುರಾಣದ ಕಥೆಗಳನ್ನು ಹೇಳುವ ಹಾಗೂ ಬೊಂಬೆ ಪ್ರದರ್ಶನ, ಮದುವೆ ಮತ್ತು ಹಬ್ಬದ ದಿನಗಳಂದು ಡೋಲು ಬಡಿದು ಹಾಡು ಹೇಳುವುದು, ಅರಿಶಿಣ, ಕುಂಕುಮ ಮಾರಾಟ, ಮಸಾಲೆ ದನಿಸಿ ಮಾರಾಟ, ದೊಂಬರಾಟ ವಿಧುಷಕ, ಮೋಡಿಗಾರರು, ಕಣ್ಣು ಕಟ್ಟುವ ವಿದ್ಯಾ, ಗೊಂದಲು ಹಾಕುವುದು (ಪೂಜಾ ವಿಧಾನ), ಗ್ರಾಮ ಚರಿತ್ರೆಗಳ ಪಾರುಪತ್ತೆಗಾರರು, ತಂಬೂರಿ ಮತ್ತು ಹಾರ್ಮೋನಿಯಂ ಸಹಾಯದಿಂದ ಪದಗಳನ್ನು ಕಟ್ಟಿ ಹಾಡುವುದು, ಬೊಂಬೆ, ಹೊದಿಕೆ, ಬಾಚಣಿಕೆ ತಯಾರಿಕೆ, ಹಚ್ಚೆ ಹಾಕುವುದು, ಎತ್ತನ್ನು ಹಿಡಿದು ಕೊಂಡು ಊರಿಂದ ಊರಿಗೆ ಹೋಗಿ ಭಿಕ್ಷೆ ಬೇಡುವುದು, ಹಠಯೋಗ, ಧರ್ಮ ಪ್ರಚಾರ, ಕಾಲಭೈರವನ ಆರಾಧನೆ, ಕತ್ತಿ ತಯಾರಿಕೆ, ಔಷಧಿ ಮಾರಾಟಗಾರರು, ಭಿಕಾರಿ ವೈದ್ಯ ವೃತ್ತಿ, ಗಾರುಡಿಗರು, ಬೀಸುವ ಕಲ್ಲು ಮತ್ತು ಬೀಸಾಣಿಕೆ ಮಾರಾಟ, ಮರದ ಸೌಟುಗಳ ತಯಾರಿಕೆ, ಸೂಜಿ, ದಾರ, ಒಳಕಲ್ಲು ಮಾರಾಟ, ಡ್ರಮ್ ಬಾರಿಸುವುದು ಮತ್ತು ಕೊಳಲು ನುಡಿಸುವುದು, ಕಬ್ಬಿಣ, ತ್ರಾಮದ ತಂತಿಗಳನ್ನು ಉಪಯೋಗಿಸಿ ವಿಧ ವಿಧವಾದ ಬಳೆ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು, ತೊಗಲು ಗೊಂಬೆ ಆಡಿಸುವುದು, ಮರಗವನ ಆಡಿಸುವುದು, ಊರೂರು ಅಲೆದು ಬಯಲಾಟಗಳ ಪ್ರದರ್ಶನ, ತಾಮ್ರ, ಬೆಳ್ಳಿ, ಕಲ್ಲು, ತ್ತಾಳೆಗಳಿಂದ ಆಭರಣಗಳನ್ನು ತಯಾರಿಸಿ ಮಾರಾಟ ಮಾಡುವುದು, ಅಲೆಮಾರಿ ಪಶುಪಾಲಕರು ಹಾಗೂ ಕೋಳಿ ಮೊಟ್ಟೆ, ಮೀನು ಮಾರಾಟ.

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯು ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯವಾಗಲಿದ್ದು, ೧೮ರಿಂದ ೬೦ ವರ್ಷದೊಳಗಿನ, ಆದಾಯ ತೆರಿಗೆ ಪಾವತಿದಾರರಾಗಿರದ, ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರದ ಕಾರ್ಮಿಕರು, ಕಾರ್ಮಿಕರ ಮಂಡಳಿಯ -www.ksuwssb.karnataka.gov.in- ಪೋರ್ಟಲ್‌ನಲ್ಲಿ ಅಗತ್ಯ ದಾಖಲೆ ಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಯೋಜನೆಯಡಿ ದೊರಕುವ ಸೌಲಭ್ಯಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಗಳು, ಉಡುಪಿ ಉಪವಿಭಾಗ, ಉಡುಪಿ ಅಥವಾ ತಾಲೂಕು ಕಾರ್ಮಿಕ ನಿರೀಕ್ಷಕರುಗಳ ಕಛೇರಿಗಳನ್ನು ಅಥವಾ ಸಹಾಯವಾಣಿ ಸಂಖ್ಯೆ:೧೫೫೨೧೪ನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಉಡುಪಿ ವಿಭಾಗದ ಕಾರ್ಮಿಕ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News