ರಸ್ತೆಗೆ ಅಡ್ಡ ಬಂದ ದನ: ಸ್ಕೂಟರ್ ಪಲ್ಟಿಯಾಗಿ ಸವಾರ ಮೃತ್ಯು
Update: 2025-04-21 21:49 IST

ಬ್ರಹ್ಮಾವರ, ಎ.21: ದನ ರಸ್ತೆಗೆ ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿಬಿದ್ದು ಸವಾರ ರೊಬ್ಬರು ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಕೊಳಲಗಿರಿ-ಆರೂರು ರಸ್ತೆಯ ಶ್ರೀ ವೀರಾಂಜನೆಯ ಭಜನಾ ಮಂದಿರದ ಬಳಿ ಎ.20ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಸಂತೆಕಟ್ಟೆ ನಿವಾಸಿ, ಮಣಿಪಾಲ ಹೊಟೇಲೊಂದರ ಮೆನೇಜರ್ ಪ್ರವೀಣ್ ಸಾಲ್ಯಾನ್(44) ಎಂದು ಗುರುತಿಸಲಾಗಿದೆ. ಇವರು ಸ್ಕೂಟರ್‌ನಲ್ಲಿ ಮಣಿಪಾಲದಿಂದ ನೀಲಾವರದಲ್ಲಿರುವ ಸಂಬಂಧಿಕರ ಮನೆಯ ಹೋಗು ತ್ತಿದ್ದಾಗ ದನವೊಂದು ಒಮ್ಮೇಲೆ ರಸ್ತೆಗೆ ಅಡ್ಡ ಬಂತ್ತೆನ್ನಲಾಗಿದೆ.
ಇದರ ಪರಿಣಾಮ ಪ್ರವೀಣ್ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿತ್ತೆನ್ನಲಾ ಗಿದೆ. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾ ಗದೆ ಎ.21ರಂದು ಬೆಳಗ್ಗೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.