ಕಾಶ್ಮೀರ ಭಯೋತ್ಪಾದಕ ದಾಳಿ: ವಿಹಿಂಪ, ಹಿಂಜಾವೇ ಬಜರಂಗ ದಳದಿಂದ ಪ್ರತಿಭಟನಾ ಪಾದಯಾತ್ರೆ

ಉಡುಪಿ, ಎ.24: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ 28ಪ್ರವಾಸಿಗರ ಭೀಕರ ಹತ್ಯೆ ಖಂಡಿಸಿ ವಿಹಿಂಪ, ಬಜರಂಗ ದಳ ಹಾಗೂ ಹಿಂದೂ ಜಾಗರಣ ವೇದಿಕೆ ವತಿಯಿಂದ ಗುರುವಾರ ಸಂಜೆ ನಗರದ ಜೋಡುಕಟ್ಟೆ ಯಿಂದ ಕ್ಲಾಕ್ ಟವರ್ ತನಕ ಪ್ರತಿಭಟನಾ ಪಾದಯಾತ್ರೆ ನಡೆಯಿತು.
ಸರ್ವೀಸ್ ಬಸ್ ನಿಲ್ದಾಣದ ಬಳಿಯ ಜಟ್ಕಾ ಸ್ಟ್ಯಾಂಡ್‌ನಲ್ಲಿ ವಿಹಿಂಪ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಹಾಗೂ ಬಿಜೆಪಿ ಮಹಿಳಾ ಪ್ರಮುಖ್ ಪೂರ್ಣಿಮಾ ಸುರೇಶ್ ನಾಯಕ್ ಮಾತನಾಡಿ, ಹಿಂದೂಸ್ಥಾನದಲ್ಲೇ ಹಿಂದೂಗಳ ಹತ್ಯೆ ಸ್ಥಿತಿ ಖಂಡನೀಯ ಎಂದರು.
ನಿಪ್ಪಾಣಿ ಶ್ರೀಕ್ಷೇತ್ರ ಮಹಾಕಾಳ ಮಹಾಸಂಸ್ಥಾನದ ಶ್ರೀಅರುಣಾನಂದ ಸ್ವಾಮೀಜಿ ಜೋಡುಕಟ್ಟೆಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು. ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಾಜಿ ಶಾಸಕ ಕೆ. ರಘುಪತಿ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಆರ್. ಸುವರ್ಣ, ಲೀಲಾ ಆರ್. ಅಮೀನ್, ಮೋಹನ ಭಟ್, ಟಿ. ಜಿ. ಹೆಗ್ಡೆ, ದಿಲ್ಲೇಶ್ ಶೆಟ್ಟಿ, ವೀಣಾ ಎಸ್. ಶೆಟ್ಟಿ, ಉದ್ಯಮಿ ಅಜಯ್ ಪಿ. ಶೆಟ್ಟಿ, ಮಧುಕರ ಮುದ್ರಾಡಿ, ನಯನಾ ಗಣೇಶ್, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.