ಮಹಿಳೆಯ ಸರ ಅಪಹರಣ
Update: 2025-04-26 22:30 IST
ಬ್ರಹ್ಮಾವರ, ಎ.26: ಕಾರಿನಲ್ಲಿ ಬಂದ ಯುವಕರು ಮಹಿಳೆಯ ಚಿನ್ನದ ಕರಿಮಣಿ ಸರ ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಎ.26ರಂದು ಬೆಳಗ್ಗೆ ಬ್ರಹ್ಮಾವರದಲ್ಲಿ ನಡೆದಿದೆ.
ವಾರಂಬಳ್ಳಿ ಗ್ರಾಮದ ಪದ್ಮ(70) ಎಂಬವರು ಮನೆಯ ಕಂಪೌಂಡಿನ ಹೊರಗಡೆ ರಸ್ತೆಯಲ್ಲಿ ಹೂವುಗಳನ್ನು ಕೊಯ್ಯುತ್ತಿರುವಾಗ ಕಾರಿನಲ್ಲಿ ಬಂದ ಎರಡು ಮೂರು ಮಂದಿ, ಪದ್ಮ ಅವರಿಗೆ ಹಲ್ಲೆ ನಡೆಸಿ, ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಮ್ ತೂಕದ 2,50,000ರೂ. ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಹಿಡಿದೆಳೆದು ಬಲವಂತವಾಗಿ ಕಸಿದುಕೊಂಡು ಕಾರು ಹತ್ತಿ ಪರಾರಿಯಾಗಿದ್ದಾರೆ.
ಇದರಿಂದ ಪದ್ಮ ತೀವ್ರವಾಗಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.