ಹಾಸ್ಟೆಲ್ ವಿದ್ಯಾರ್ಥಿ ನಾಪತ್ತೆ
Update: 2025-04-26 22:33 IST

ಹೆಬ್ರಿ, ಎ.26: ಹೆಬ್ರಿ ಎಸ್‌ಆರ್ ಆಂಗ್ಲ ಮಾಧ್ಯಮ ಶಾಲೆಯ ಹಾಸ್ಟೇಲ್‌ನಲ್ಲಿ ಉಳಿದಿದ್ದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಎ.25ರಂದು ಸಂಜೆ ವೇಳೆ ಅಭಿನಂದನ್(15) ಎಂಬಾತ ತನ್ನ ಸಹಪಾಠಿ ಯಿಂದ 500ರೂ. ಪಡೆದು ತಂದೆ ತಾಯಿ ನೆನಪಾಗುವುದಾಗಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಶಾಲೆಯ ಹಾಸ್ಟೇಲ್ ನಿಂದ ಹೋಗಿರುವುದಾಗಿ ತಿಳಿದುಬಂದಿದೆ. ಆದರೆ ಆತ ಮನೆಗೂ ಹೋಗದೆ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.