ಹಿರಿಯಡ್ಕ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
Update: 2025-04-27 21:44 IST

ಸಾಂದರ್ಭಿಕ ಚಿತ್ರ
ಹಿರಿಯಡ್ಕ, ಎ.27: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಕುಕ್ಕೆಹಳ್ಳಿ ಗ್ರಾಮದ ಜೋಳಬೆಟ್ಟು ಕ್ರಾಸ್ ಎಂಬಲ್ಲಿ ಎ.26ರಂದು ರಾತ್ರಿ ನಡೆದಿದೆ.
ಸ್ಥಳೀಯರಾದ ಸುಜಾತ ಎಂಬವರು ತನ್ನ ಅಕ್ಕನ ಮನೆಯ ಗೃಹ ಪ್ರವೇಶದ ಕಾರ್ಯಕ್ರಮಕ್ಕೆ ಸಂಸಾರ ಸಮೇತವಾಗಿ ಮನೆಗೆ ಬೀಗವನ್ನು ಹಾಕಿ ಹೋಗಿದ್ದರು. ಈ ವೇಳೆ ಮನೆಯ ಎದುರು ಹಾಕಿದ ಬೀಗವನ್ನು ಮುರಿದು ಒಳಗೆ ನುಗ್ಗಿದ ಕಳ್ಳರು ಮಲಗುವ ಕೋಣೆಯಲ್ಲಿದ್ದ 2,88,000 ರೂ. ಮೌಲ್ಯದ ಚಿನಾಭರಣ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.