ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಮೂವರು ವಶಕ್ಕೆ

Update: 2025-04-27 21:45 IST
ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ: ಮೂವರು ವಶಕ್ಕೆ
  • whatsapp icon

ಉಡುಪಿ, ಎ.27: ಉಡುಪಿ ನಾಗಬನದ ಬಳಿಯ ಶ್ರೀ ಲಕ್ಷ್ಮೀವೆಂಕಟರಮಣ ದೇವಾಸ್ಥಾನದ ವಾಹನದ ಪಾರ್ಕಿಂಗ್‌ ಪ್ರದೇಶದಲ್ಲಿ ಎ.26ರಂದು ಬೆಳಗ್ಗೆ ಪರಸ್ಪರ ಗಲಾಟೆ ಮಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಭಯ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡಿದ ಆರೋಪದಲ್ಲಿ ಮೂವರನ್ನು ಉಡುಪಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಹನುಮಪ್ಪ ಬೆಂಡ್ಯಪ್ಪ ಮಗಡಾರ್(46), ನಾಗರಾಜ ಭೀಮಪ್ಪ ದೊಡ್ಡಮನಿ(27), ನಾಗಪ್ಪ ಹನುಮಂತ ಸಿದ್ದಲಿಂಗಪ್ಪನವರ್‌(30) ಎಂಬವರು ಪರಸ್ಪರ ಜಗಳವಾಡುತ್ತಾ ಅವಾಚ್ಯ ಶಬ್ದಗಳಿಂದ ಬೈದು ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News