ಮಾರ್ಪಳ್ಳಿ ದೇವಸ್ಥಾನ ನೂತನ ಸಮಿತಿಯಿಂದ ಗ್ರಾಮ ಸಭೆ

ಉಡುಪಿ, ಎ.28: ಮಾರ್ಪಳ್ಳಿ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನೂತನ ಆಡಳಿತ ಸಮಿತಿ ವತಿಯಿಂದ ಪ್ರಥಮ ಗ್ರಾಮ ಸಭೆ ರವಿವಾರ ಉಮಾಮಹೇಶ್ವರಿ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕಂಬಳಮನೆ ದಿನೇಶ್ ಶೆಟ್ಟಿ ಮಾರ್ಪಳ್ಳಿ ವಹಿಸಿದ್ದರು. ದೇವಸ್ಥಾನದ ಅನುವಂಶಿಯ ತಂತ್ರಿಗಳಾದ ಚಂದ್ರಕಾಂತ್ ತಂತ್ರಿ ಮಾತನಾಡಿದರು.
ಸಭೆಯಲ್ಲಿ ಆಡಳಿತ ಸಮಿತಿಯ ಸದಸ್ಯರಾದ ಪಾಂಡುರಂಗ ನಾಯ್ಕ್ ಮಾರ್ಪಳ್ಳಿ, ಶಂಕರ್ ಆಚಾರ್ಯ ಮಾರ್ಪಳ್ಳಿ, ವಿಜಯಲಕ್ಷ್ಮೀ ಎಂ., ಚಂದ್ರಾವತಿ ಎಂ., ಪರ್ಯಾಯ ಅರ್ಚಕರಾದ ವೆಂಕಟಾಚಲ ಉಪಾ ಧ್ಯಾಯ, ರಾಜೇಂದ್ರ ಉಪಾಧ್ಯಾಯ, ಅನಂತ ಉಪಾಧ್ಯಾಯ, ಪ್ರಸನ್ನ ಉಪಾಧ್ಯಾಯ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಗರೋಡಿ ಮನೆ ಶೇಖರ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿದರು. ಸುಬ್ರಹ್ಮಣ್ಯ ಉಪಾಧ್ಯಾಯ ಕಾರ್ಯಕ್ರಮ ನಿರೂಪಿ ಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ಎಸ್.ಶೆಟ್ಟಿಗಾರ್ ವಂದಿಸಿದರು.