ಮಲಬಾರ್ ಗೋಲ್ಡ್‌ನ ‘ತನ್ವಿಕ’ ನೂತನ ಆಭರಣ ಸಂಗ್ರಹ ಅನಾವರಣ

ಉಡುಪಿ, ಎ.28: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ‘ಡಿವೈನ್’ ಎಂಬ ವಿಶೇಷ ಬ್ರ್ಯಾಂಡಿನಡಿ ಹೊರತರಲಾದ ‘ತನ್ವಿಕ’ ನೂತನ ಆಭರಣ ಸಂಗ್ರಹವನ್ನು ಸೋಮವಾರ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಅನಾವರಣಗೊಳಿಸಲಾಯಿತು.
ಈ ಹೊಸ ಸಂಗ್ರಹವನ್ನು ಆರ್ಕಿಟೆಕ್ಟರ್ ಎ.ಆರ್.ಚಿನ್ಮಯಿ ಹಾಗೂ ರೂಪದರ್ಶಿ ಶುಭ ಪ್ರಶಾಂತ್ ಅನಾವರಣಗೊಳಿಸಿ ಶುಭ ಹಾರೈಸಿದರು. ಇವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತನ್ವಿಕ್ ಆಭರಣದ ಕುರಿತು ಮಾತನಾಡಿದ ಸಿಬ್ಬಂದಿ ನಿತ್ಯಾನಂದ, ವೈವಿದ್ಯತೆಯಿಂದ ಕೂಡಿದ ಈ ನೂತನ ಸಂಗ್ರಹವು ದೈವತ್ತವನ್ನು ಸಾರುವ ಆಭರಣವಾಗಿದೆ. ಇದರಲ್ಲಿ ಸಾಂಪ್ರದಾಯಿಕವಾಗಿ ಹಾಗೂ ಅದೃಷ್ಟ ತರುವ ಲಕ್ಷ್ಮೀ ದೇವತೆಯನ್ನು ಅಳವಡಿಸಲಾಗಿದೆ. ಚಂದ್ರಹಾಸ ಮತ್ತು ಪಿಲಿಗ್ರಿ ಕುಶಲತೆ ಇದೆ. ಇದೊಂದು ಅದ್ಭುತವಾದ ಸಂಗ್ರಹ ಆಗಿದೆ ಎಂದರು.
ತನ್ವಿಕ ಆಭರಣಗಳು ಎಲ್ಲ ವಯೋಮಾನದವರಿಗೆ ತಕ್ಕಂತೆ ಹಬ್ಬಗಳು, ಮದುವೆ ಇತರ ಸಮಾರಂಭ ಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ನೆಕ್ಲೇಸ್, ಓಲೆಗಳು, ಬಳೆಗಳು ಮತ್ತು ಉಂಗುರಗಳ ಸಾಕಷ್ಟು ಸಂಗ್ರಹ ಗಳು ಲಭ್ಯ ಇದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರೆಹಮಾನ್, ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮೆನೇಜರ್ ಮುಸ್ತಾಫ ಎ.ಕೆ., ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.