ಕುಂದಾಪುರ ಚರ್ಚಿನಲ್ಲಿ ಕಿರು ಸಮುದಾಯ ದಿವಸ ಆಚರಣೆ

Update: 2025-04-28 20:41 IST
ಕುಂದಾಪುರ ಚರ್ಚಿನಲ್ಲಿ ಕಿರು ಸಮುದಾಯ ದಿವಸ ಆಚರಣೆ
  • whatsapp icon

ಕುಂದಾಪುರ, ಎ.28: ಕುಂದಾಪುರದಲ್ಲಿ ರೋಜರಿ ಮಾತಾ ಚರ್ಚಿನಲ್ಲಿ ಕಿರು ಸಮುದಾಯದ ದಿವಸವನ್ನು ರವಿವಾರ ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಧರ್ಮ ಧರ್ಮಪ್ರಾಂತ್ಯದ ಕಿರು ಸಮುದಾಯ ಆಯೋಗದ ನಿರ್ದೇಶಕ ವಂ.ಹೆರಾಲ್ಡ್ ಪಿರೇರಾ ಮುಂದಾಳತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಲಾಯಿತು. ಚರ್ಚಿನ ಧರ್ಮಗುರು ವಂ.ಪೌಲ್ ರೇಗೊ ಸಹ ಬಲಿದಾನವನ್ನು ಅರ್ಪಿಸಿದರು. ವಾಳೆಯ ಕಿರು ಸಮುದಾಯದ ಸಂಚಾಲಕರು ಬಲಿದಾನದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು.

ನಂತರ ನೆಡೆದ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಧರ್ಮ ಭಗಿನಿಯರಿಂದ ಪ್ರಾರ್ಥನ ಗೀತೆಯ ಮೂಲಕ ಚಾಲನೆ ನೀಡಲಾಯಿತು. ವೈ.ಸಿ.ಎಸ್. ಮತ್ತು ಐ.ಸಿ.ವೈ.ಎಮ್ ಸದಸ್ಯರಿಂದ ಗೀತೆಗಳು, ಕಿರುನಾಟಕಗಳು ಪ್ರದರ್ಶನಗೊಂಡವು. ಬಳಿಕ ಕುಂದಾಪುರ ಚರ್ಚಿನ 13 ವಾಳೆಯವರು ಸಮುದಾಯದ ಗೀತೆಗಳ ನ್ರತ್ಯ ಪ್ರದರ್ಶನ ಜೊತೆಗೆ ಕಿರು ನಾಟಕ, ನೃತ್ಯ ಕವಾಲಿಗಳನ್ನು ಪ್ರದರ್ಶಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಚರ್ಚಿನ ವ್ಯಾಪ್ತಿಗೆ ಒಳಪಟ್ಟ ವಿಶೇಷ ಸಾಧಕರಾದ, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಅನುಷ್ಠಾನ ಕುಂದಾಪುರ ತಾಲೂಕು ಸಮಿತಿಯ ಸದಸ್ಯೆ ಆಶಾ ಕರ್ವಾಲ್ಲೊ, ಮೂರು ಅವಧಿಗೆ ಕುಂದಾಪುರ ಚರ್ಚಿನ ಸರ್ವ ಆಯೋಗಗಳ ಸಂಯೋಜಕಿಯಾಗಿ ಕಾರ್ಯ ನಿರ್ವಹಿಸಿದ ಪ್ರೇಮಾ ಡಿಕುನ್ಹಾ, ಉಡುಪಿ ಧರ್ಮ ಪ್ರಾಂತ್ಯದ ಐ.ಸಿ.ವೈ.ಎಂ ಅಧ್ಯಕ್ಷ ನೀತಿನ್ ಬರೆಟ್ಟೊ. ಐ.ಸಿ.ವೈ.ಎಂ ಕುಂದಾಪುರ ಇದರ ಅಧ್ಯಕ್ಷ ರೀಯಾಲಿಟಿ ಶೋ ಸಂಗೀತ ಪ್ರತಿಭೆ ಸ್ಯಾಮುವೇಲ್ ಲುವಿಸ್ ಅವರನ್ನು ಸನ್ಮಾನಿಸಲಾಯಿತು

ಕಿರು ಸಮುದಾಯ ಆಯೋಗದ ವರದಿಯನ್ನು ಪ್ರಮೀಳಾ ಡಿಸಿಲ್ವಾ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವೀಜೆತರಿಗೆ ಬಹುಮಾನಗಳನ್ನು ವಿತರಿಸ ಲಾಯಿತು. ಸರ್ವ ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜಕಿ ಡಾ.ಸೋನಿ ಡಿಕೋಸ್ತಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News