ಉಡುಪಿ: ರಸ್ತೆಯಲ್ಲಿ ಜಲ್ಲಿ ಚೆಲ್ಲುತ್ತಿದ್ದ ರೆಡಿಮಿಕ್ಸ್ ವಾಹನಕ್ಕೆ ದಂಡ

Update: 2025-04-29 21:03 IST
ಉಡುಪಿ: ರಸ್ತೆಯಲ್ಲಿ ಜಲ್ಲಿ ಚೆಲ್ಲುತ್ತಿದ್ದ ರೆಡಿಮಿಕ್ಸ್ ವಾಹನಕ್ಕೆ ದಂಡ
  • whatsapp icon

ಉಡುಪಿ, ಎ.29: ಮಣಿಪಾಲದಿಂದ ಪರ್ಕಳ ಮಾರ್ಗವಾಗಿ ಜಲ್ಲಿ ಸಿಮೆಂಟ್ ಮಿಶ್ರಣವನ್ನು ಚೆಲ್ಲಿಕೊಂಡು ಹೋಗುತ್ತಿದ್ದ ರೆಡಿಮಿಕ್ಸ್ ವಾಹನಕ್ಕೆ ಮಣಿಪಾಲ ಪೊಲೀಸರು ದಂಡ ವಿಧಿಸಿದ್ದಾರೆ.

ಮಣಿಪಾಲದ ರೆಡಿ ಮಿಕ್ಸರ್ ಘಟಕದಿಂದ ಜಲ್ಲಿ ಸಿಮೆಂಟ್ ಮಿಶ್ರಣವನ್ನು ತುಂಬಿಸಿಕೊಂಡು ರಸ್ತೆಯುದ್ದಕ್ಕೂ ಚೆಲ್ಲಿಕೊಂಡು ಸಾಗುತ್ತಿದ್ದ ವಾಹನಗಳ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದರು. ಈ ಬಗ್ಗೆ ರೇಡಿಮಿಕ್ಸ್ ಸಂಸ್ಥೆಗಳಿಗೆ ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆಯ ಸಲಹೆಗಳನ್ನು ನೀಡಿತ್ತು. ಆದರೂ ಕೂಡ ನಿರ್ಲಕ್ಷ ವಹಿಸುತ್ತಿರುವುದು ಕಂಡುಬಂದಿದೆ.

ಆ ಹಿನ್ನೆಲೆಯಲ್ಲಿ ಇಂದು ಮಣಿಪಾಲದಿಂದ ಪರ್ಕಳ ಮಾರ್ಗವಾಗಿ ಜಲ್ಲಿ ಸಿಮೆಂಟ್ ಮಿಶ್ರಣವನ್ನು ರಸ್ತೆ ಯುದ್ದಕ್ಕೂ ಚೆಲ್ಲಿಕೊಂಡು ಹೋಗುತ್ತಿದ್ದ ರೆಡಿ ಮಿಕ್ಸ್ ವಾಹನಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕರು 5000ರೂ. ದಂಡ ವಿಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News