ಪ್ರತ್ಯೇಕ ಪ್ರಕರಣ: ಮೂವರ ಆತ್ಮಹತ್ಯೆ

ಅಮಾಸೆಬೈಲು, ಎ.29: ಮಧ್ಯ ಸೇವಿಸುವ ಚಟ ಹೊಂದಿದ್ದ ಅಮಾಸೆಬೈಲು ಗ್ರಾಮದ ಬಳ್ಮನೆ ಬೂತ್ನಾಡಿ ನಿವಾಸಿ ನಾರಾಯಣ (62) ಎಂಬವರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಎ.28ರಂದು ಬೆಳಗ್ಗೆ ಮನೆಯ ದನದ ಹಟ್ಟಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕಾರ್ಕಳ ಮಲೆಬೆಟ್ಟು ದುರ್ಗಾ ನಿವಾಸಿ ಕರುಣಾಕರ(34) ಎಂಬವರು ಎ.28ರಂದು ಮಧ್ಯಾಹ್ನ ಕಾರ್ಕಳಕ್ಕೆ ಕೆಲಸಕ್ಕೆ ಹೋದವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಅನಾರೋಗ್ಯದಿಂದ ಮಾನಸಿಕವಾಗಿ ನೊಂದ ಕಿದಿಯೂರು ಗ್ರಾಮದ ಮಾಧವ(59) ಎಂಬವರು ಎ.28ರಂದು ರಾತ್ರಿ ಮನೆಯ ಮುಂದೆ ಇರುವ ಬಾವಿಯ ನೀರನ್ನು ಸೇದಲು ಅಳವಡಿಸಿದ್ದು ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.