ಗೃಹಲಕ್ಷ್ಮಿಗೆ ಇನ್ನು ನೇರ ನೋಂದಣಿ
Update: 2023-07-25 15:13 GMT
ಉಡುಪಿ, ಜು.25: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳು ಇನ್ನೂ ಮುಂದೆ ಎಸ್‌ಎಂಎಸ್‌ಗಾಗಿ ಕಾಯದೇ ನೇರವಾಗಿ ಹೆಸರನ್ನು ನೋಂದಾವಣಿ ಮಾಡಿಕೊಳ್ಳಬಹುದಾಗಿದೆ.
ಇನ್ನು ಮುಂದೆ ಫಲಾನುಭವಿಗಳ ಮೊಬೈಲ್‌ಗೆ ಯಾವುದೇ ಎಸ್‌ಎಂಎಸ್‌ಗಳನ್ನು ಕಳುಹಿಸುವುದಿಲ್ಲ. ಅವರು ತಮಗೆ ಹತ್ತಿರದ ಗ್ರಾಮ ಒನ್, ಗ್ರಾಮ ಪಂಚಾಯತ್‌ನ ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ನಗರದ ವಾರ್ಡ್ ಕಚೇರಿ ಹೀಗೆ ಯಾವುದಾದರು ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.