ಪಡುಬಿದ್ರೆ| ಅನುಮತಿ ಇಲ್ಲದೆ ಜಾಥಾ: ಎಸ್ಡಿಪಿಐ ಮುಖಂಡರ ವಿರುದ್ಧ ಪ್ರಕರಣ ದಾಖಲು

Update: 2024-12-10 17:02 GMT

ಪಡುಬಿದ್ರೆ: ಅನುಮತಿ ಇಲ್ಲದೆ ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ ಟೋಲ್‌ ಗೇಟ್‌ ಬಳಿ ಮಂಗಳವಾರ "ಚಲೋ ಬೆಳಗಾವಿ" ಅಂಬೇಡ್ಕರ್ ಜಾಥಾವನ್ನು ನಡೆಸಿದ ಎಸ್ ಡಿ ಪಿ ಐ ಮುಖಂಡರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ಅಕ್ರಮ ಗುಂಪುಗೂಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ತೊಂದರೆ ಮಾಡಿ ಕಾನೂನು ಉಲ್ಲಂಘಿಸಿದ ಆರೋಪ ದಡಿ ಎಸ್ ಡಿ ಪಿ ಐ ನಾಯಕರಾದ ರಿಯಾಝ್ ಕಡಂಬು, ಕಾಪುವಿನ ಹನೀಫ್‌ ಮೂಳೂರು, ನೂರುದ್ದೀನ್‌ ಮಲ್ಲಾರು, ಫಿರೋಝ್ ಕಂಚಿನಡ್ಕ, ತೌಫೀಕ್‌ ಉಚ್ಚಿಲ, ಮಜೀದ್‌ ಉಚ್ಚಿಲ, ಇಬ್ರಾಹಿಂ ಕಂಚಿನಡ್ಕ ಹಾಗೂ ಇತರರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2024 ಕಲಂ: 57,189(2),189(3), 281,285 ಜೊತೆಗೆ 190 ಬಿ.ಎನ್.ಎಸ್‌ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News