ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ಉಡುಪಿ, ಸೆ.6: ತೋನ್ಸೆ-ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇತ್ತಿಚಿಗೆ ಶಿಕ್ಷಕರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ತೋನ್ಸೆಯ ಖಂಡಿಗೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ರವೀಂದ್ರನಾಥ್ ರಾವ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಶಿಕ್ಷಕ ಪಠ್ಯ ಪುಸ್ತಕದಲ್ಲಿರುವ ವಿಷಯಗಳನ್ನು ಬೋಧಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳಲ್ಲಿ ನೈತಿಕತೆ ಬೆಳೆಸಲು ಪೂರಕವಾದ ವಿಚಾರಗಳನ್ನು ಅಧ್ಯಯನದ ಸಂದರ್ಭಗಳಲ್ಲಿ ಬೋಧಿಸಬೇಕು. ಆಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.
ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿಯರಾದ ಬೇಬಿ ಲವೀನ ಪಾಂಗ್ಲನ್ನ ಹಾಗೂ ಶೋಭ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ವಹಿಸಿದ್ದರು.
ವೇದಿಕೆಯಲ್ಲಿ ಹಿರಿಯ ಟ್ರಸ್ಟಿಗಳಾದ ಮೌಲಾನ ಆದಂ ಸಾಹೇಬ್, ಹುಸೇನ್ ಮಾಸ್ಟರ್, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸದಸ್ಯೆ ರಿಹಾನ ಕಾರ್ಕಳ, ಪ್ರಾಂಶುಪಾಲ ಡಾ.ಸಬೀನಾ, ದಿವ್ಯ ಪೈ, ಮುಖ್ಯ ಶಿಕ್ಷಕಿಯರಾದ ಸುನಂದ, ಶಾದತ್ ಆಸೀಫ್ ಮುಂತಾದವರು ಉಪಸ್ಥಿರಿದ್ದರು. ನಂತರ ಶಿಕ್ಷಕರಿಗಾಗಿ ವಿವಿಧ ಸಾಂಸ್ಕ್ರತಿಕ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡಲಾಯಿತು.
ಶಿಕ್ಷಕಿಯರಾದ ಅಲ್‌ಶೀಫಾ ಶೇಕ್ ಸ್ವಾಗತಿಸಿದರು. ಶಾಹಿನಾ ನಾಕುದಾ ವಂದಿಸಿದರು. ಲವೀನಾ ಕ್ಲಾರ ಹಾಗೂ ಸುನೈನಾ ಕಾರ್ಯಕ್ರಮ ನಿರೂಪಿಸಿದರು.